ಮಂಗಳೂರು, ಜೂನ್ 03, 2021 (ಕರಾವಳಿ ಟೈಮ್ಸ್) : ಭರತಿಯ ಅಂಚೆ ಇಲಾಖೆ ಮಂಗಳೂರು ವಿಭಾಗದ ವತಿಯಿಂದ 10 ರಿಂದ 15 ವರ್ಷದ ಒಳಗಿನ ಮಕ್ಕಳಿಗಾಗಿ ಕೋವಿಡ್ ಪ್ರಯುಕ್ತ ಪತ್ರಲೇಖನ ಸ್ಪರ್ಧೆಯನ್ನು ಏರ್ಪಡಿಸಿದೆ. "ಕೋವಿಡ್ ಪಿಡುಗಿನಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಹೇಗೆ ಸುರಕ್ಷಿತವಾಗಿ ಇರಿಸುತ್ತೀರಿ” (How you keeping yourself and your family safe in the Covid Pandemic) ಎಂಬ ವಿಷಯದಲ್ಲಿ ಪತ್ರ ಲೇಖನ ಸ್ಪರ್ಧೆ ನಡೆಯಲಿದ್ದು, ಮೇಲ್ಕಾಣಿಸಿದ ವಯೋಮಾನದ ಮಕ್ಕಳು ಎ4 ಶೀಟಿನಲ್ಲಿ 1000 ಪದಗಳಿಗೆ ಮೀರದಂತೆ ಲೇಖನ ಬರೆದು, ಲೇಖನದ ಪ್ರತಿಯನ್ನು ಸ್ಕ್ಯಾನ್ ಮಾಡಿ ಜೊತೆಗೆ ಜನ್ಮ ದಿನಾಂಕದ ಪುರಾವೆಯನ್ನೂ ಸ್ಕ್ಯಾನ್ ಮಾಡಿ ಜೂನ್ 20 ರೊಳಗೆ domangalore.ka@indiapost.gov.in ಗೆ ಇಮೇಲ್ ಮುಖಾಂತರ ಕಳುಹಿಸಬೇಕು.
ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಹಾಗೂ ಸರ್ಟಿಫಿಕೇಟ್ ಕೊಡಲಾಗುವುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-2217076 ಅಥವಾ 2218400ಗೆ ಸಂಪರ್ಕಿಸಬಹುದು ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment