ಕೆಎಸ್ಆರ್‌ಟಿಸಿ ಹೆಸರು ಹಾಗೂ ಲೋಗೋ ಕೇರಳದ ಸೊತ್ತು, ಕರ್ನಾಟಕ ಇನ್ನು ಆ ಹೆಸರು ಬಳಸುವಂತಿಲ್ಲ : ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಅಂತಿಮ ತೀರ್ಪು - Karavali Times ಕೆಎಸ್ಆರ್‌ಟಿಸಿ ಹೆಸರು ಹಾಗೂ ಲೋಗೋ ಕೇರಳದ ಸೊತ್ತು, ಕರ್ನಾಟಕ ಇನ್ನು ಆ ಹೆಸರು ಬಳಸುವಂತಿಲ್ಲ : ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಅಂತಿಮ ತೀರ್ಪು - Karavali Times

728x90

2 June 2021

ಕೆಎಸ್ಆರ್‌ಟಿಸಿ ಹೆಸರು ಹಾಗೂ ಲೋಗೋ ಕೇರಳದ ಸೊತ್ತು, ಕರ್ನಾಟಕ ಇನ್ನು ಆ ಹೆಸರು ಬಳಸುವಂತಿಲ್ಲ : ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಅಂತಿಮ ತೀರ್ಪು

 ಬೆಂಗಳೂರು, ಜೂನ್ 03, 2021 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆ ಇನ್ನು ಮುಂದೆ ಕೆಎಸ್ಆರ್‌ಟಿಸಿ ಪದ ಹಾಗೂ ಲೋಗೋ ಬಳಸುವಂತಿಲ್ಲ. ಅದು ಕೇರಳದ ಅಧಿಕೃತ ಸೊತ್ತು ಎಂದು ಕೇಂದ್ರ ವ್ಯಾಪಾರ ಗುರುತು ನೋಂದಾವಣಿ (ಟ್ರೇಡ್ ಮಾರ್ಕ್ ರಿಜಿಸ್ಟಿ) ಬುಧವಾರ ಅಂತಿಮ ತೀರ್ಪು ನೀಡಿದೆ. 

ಕರ್ನಾಟಕ ಮತ್ತು ಕೇರಳ ನಡುವೆ ಕಳೆದ 27  ವರ್ಷಗಳಿಂದಲೂ ಕೆಎಸ್ಆರ್‌ಟಿಸಿಗಾಗಿ ಕಾನೂನು ಸಮರ ನಡೆಸುತ್ತಾ ಬಂದಿದ್ದು ಇದೀಗ ಹೋರಾಟಕ್ಕೆ ಫುಲ್ ಸ್ಟಾಪ್ ಬಿದ್ದಿದೆ. ಕೇರಳ ಮಾತ್ರ ಇನ್ನು ಮುಂದೆ ತನ್ನ ಸಾರಿಗೆ ಸಂಸ್ಧೆಯನ್ನು ಕೆಎಸ್ಆರ್‌ಟಿಸಿ ಅಂತ ಬಳಸಬೇಕು. ಅಲ್ಲದೆ ಕರ್ನಾಟಕ ರಾಜ್ಯದ ಸಾರಿಗೆ ಬಸ್ ಮತ್ತು ಇತರ ಕಡೆ ನೋದಾಯಿಸಿದ್ದ, ಪ್ರಕಟನೆ ಬೋರ್ಡ್ ಎಲ್ಲ ಲೋಗೋ ಮತ್ತು ಚಿತ್ರಗಳನ್ನು ತೆಗೆಯಬೇಕಾಗುತ್ತದೆ.  

ಆನ್ ಲೈನ್ ಮೂಲಕ ಬಸ್ ಟಿಕೆಟ್ ಬುಕ್ ಮಾಡುವವರಿಗೆ ತಲೆಬಿಸಿಯಾಗುತ್ತಿತ್ತು. ಇದಕ್ಕೆ ಕಾರಣ ಕೇರಳ ರಸ್ತೆ ಸಾರಿಗೆ ನಿಮಗದ ಬಸ್ ಟಿಕೆಟ್ ಕಾದಿರಿಸುವವರಿಗೆ ಕರ್ನಾಟಕ ಕೆಎಸ್ಆರ್‌ಟಿಸಿ ಬಸ್ ಸೇವೆಯ ವಿವರಗಳು ಲಭ್ಯವಾಗುತ್ತಿತ್ತು. ಹೀಗಾಗಿ ಕೇರಳ ಸರಕಾರ ಆಕ್ಷೇಪವೆತ್ತಿತ್ತು. 

ಎರಡೂ ರಾಜ್ಯಗಳು ಹಲವಾರು ವರ್ಷಗಳಿಂದ ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿ ಕೆಎಸ್‍ಆರ್ ಟಿಸಿ ಹೆಸರನ್ನು ಬಳಸುತ್ತಿವೆ. ಆದರೆ 2014 ರಲ್ಲಿ ಕರ್ನಾಟಕವು ಹೆಸರು ಕರ್ನಾಟಕಕ್ಕೆ ಸೇರಿದ್ದು, ಅದನ್ನು ಕೇರಳ ಸಾರಿಗೆ ಸಂಸ್ಥೆ ಬಳಸಬಾರದು ಎಂದು ನೋಟಿಸ್ ನೀಡಿತ್ತು. ಆಗ ಕೇರಳ ಸಾರಿಗೆಯ ಸಿಎಂಡಿ ಆಗಿದ್ದ ದಿವಂಗತ ಆಂಥೋನಿ ಚಾಕೊ ಅವರು ಕೇರಳಕ್ಕೆ ನೀಡುವಂತೆ ಕೇಂದ್ರ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಟ್ರೇಡ್‍ಮಾರ್ಕ್ ಗಳ ರಿಜಿಸ್ಟ್ರಾರ್‍ ಗೆ ಅರ್ಜಿ ಸಲ್ಲಿಸಿದರು. ನಂತರ ಹಲವಾರು ವರ್ಷಗಳ ಕಾನೂನು ಹೋರಾಟಗಳು ನಡೆದವು. ಇದೀಗ ಅಂತಿಮವಾಗಿ, 'ಟ್ರೇಡ್‍ಮಾರ್ಕ್ ಗಳ ಕಾಯ್ದೆ 1999' ರ ಅಡಿಯಲ್ಲಿ, ಕೆಎಸ್‍ಆರ್ ಟಿಸಿ ಟ್ರೇಡ್ ಮಾರ್ಕ್ ಮತ್ತು ಆನವಂಡಿ ಎಂಬ ಸಂಕ್ಷೇಪಣವನ್ನು ಕೇರಳ ರಸ್ತೆ ಸಾರಿಗೆ ನಿಗಮಕ್ಕೆ ಟ್ರೇಡ್ ಮಾರ್ಕ್ ಅಥಾರಿಟಿ ಆಫ್ ಇಂಡಿಯಾ ಮಂಜೂರು ಮಾಡಿದೆ. 

1948 ರಲ್ಲಿ ಕರ್ನಾಟಕದಲ್ಲಿ ಬಸ್ ಸೇವೆ ಆರಂಭವಾದಾಗ ಅದನ್ನು ಮೈಸೂರು ಸರಕಾರಿ ರಸ್ತೆ ಸಾರಿಗೆ ಇಲಾಖೆ (ಎಂಜಿಆರ್‌ಟಿಡಿ) ಎಂದು ಕರೆಯಲಾಗಿತ್ತು. ಆದರೆ 1973ರ ನಂತರ ಮೈಸೂರು ಕರ್ನಾಟಕ ಅಂತ ನಾಮಕರಣವಾದ ಮೇಲೆ ಕೆಎಸ್ಆರ್‌ಟಿಸಿ ಪದ ಬಳಸಲು ಆರಂಭಿಸಿತ್ತು. 

ಕೇರಳದಲ್ಲೂ ಕೆಎಸ್ಆರ್‌ಟಿಸಿಗೂ ಮೊದಲು ತಿರುವಾಂಕೂರು ರಾಜ್ಯ ಸಾರಿಗೆ ಇಲಾಖೆ (ಟಿಎಸ್ಟಿಡಿ) ಎಂದು ಕರೆಯಾಗುತ್ತಿತ್ತು. ಬಳಿಕ 1965 ರಲ್ಲಿ ಕೇರಳ ಸ್ಟೇಟ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಶನ್ ಆಗಿತ್ತು. ಇದನ್ನು ಮುಂದಿಟ್ಟುಕೊಂಡು ಕೇರಳ ವಾದ ಮಂಡಿಸಿ ಇದೀಗ ಹೋರಾಟದಲ್ಲಿ ಮೇಲುಗೈ ಸಾಧಿಸಿದೆ. ಈ ಮೂಲಕ ಕೆಎಸ್‍ಆರ್ ಟಿಸಿ, ಲೋಗೋ ಮತ್ತು ‘ಆನವಂಡಿ' (ಆನೆ) ಎಂಬ ಸಂಕ್ಷಿಪ್ತ ರೂಪ ಈಗ ಕೇರಳ ಪಾಲಾಗಿದೆ.

ಕೆಎಸ್‍ಆರ್‍ಟಿಸಿಯನ್ನು ಇನ್ನು ಕೇರಳ ಮಾತ್ರ ಬಳಸಬಹುದಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಕರ್ನಾಟಕಕ್ಕೆ ನೋಟಿಸ್ ಕಳುಹಿಸಲಾಗುವುದು ಎಂದು ಕೇರಳ ಕೆಎಸ್‍ಆರ್ ಟಿಸಿ ಎಂಡಿ ಮತ್ತು ಸಾರಿಗೆ ಕಾರ್ಯದರ್ಶಿ ಬಿಜು ಪ್ರಭಾಕರ್ ಹೇಳಿದ್ದಾರೆ.

ಕೆಎಸ್‍ಆರ್‍ಟಿಸಿ ಟ್ರೇಡ್ ಮಾರ್ಕ್ ಕೇರಳ ಮಾತ್ರ ಬಳಸುವಂತೆ ಮಾಡಲಾದ ಆದೇಶದ ಬಗ್ಗೆ ಗಮನಕ್ಕೆ ಬಂದಿದೆ. ಆದರೆ ಕೇರಳ ಕೆಎಸ್‍ಆರ್ ಟಿಸಿ ಎಂಡಿಯ ನೋಟಿಸ್ ನಮ್ಮ ಕೈ ಸೇರಿಲ್ಲ. ಅಧಿಕೃತ ಆದೇಶದ ಕಾಪಿ ಸಿಕ್ಕಿದ ಬಳಿಕ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಲಾಗುವುದು. ಟ್ರೇಡ್ ಮಾರ್ಕ್ ಅಥಾರಿಟಿ ಆಫ್ ಇಂಡಿಯಾದಿಂದ ಆದೇಶ ಕಾಪಿ ಬರಬೇಕಷ್ಟೆ  ಎಂದು ಕರ್ನಾಟಕ ಕೆಎಸ್‍ಆರ್ ಟಿಸಿ ಎಂಡಿ ಶಿವಯೋಗಿ ಕಳಸದ್ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕೆಎಸ್ಆರ್‌ಟಿಸಿ ಹೆಸರು ಹಾಗೂ ಲೋಗೋ ಕೇರಳದ ಸೊತ್ತು, ಕರ್ನಾಟಕ ಇನ್ನು ಆ ಹೆಸರು ಬಳಸುವಂತಿಲ್ಲ : ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಅಂತಿಮ ತೀರ್ಪು Rating: 5 Reviewed By: lk
Scroll to Top