ಲಾಕ್‍ಡೌನ್ ವೇಳೆ ವಶಕ್ಕೆ ಪಡೆದ ವಾಹನಗಳ ಬಿಡುಗಡೆಗೆ ಪೊಲೀಸರಿಗೆ ಅಧಿಕಾರ ನೀಡಿ ಹೈಕೋರ್ಟ್ ಗ್ರೀನ್ ಸಿಗ್ನಲ್ - Karavali Times ಲಾಕ್‍ಡೌನ್ ವೇಳೆ ವಶಕ್ಕೆ ಪಡೆದ ವಾಹನಗಳ ಬಿಡುಗಡೆಗೆ ಪೊಲೀಸರಿಗೆ ಅಧಿಕಾರ ನೀಡಿ ಹೈಕೋರ್ಟ್ ಗ್ರೀನ್ ಸಿಗ್ನಲ್ - Karavali Times

728x90

8 June 2021

ಲಾಕ್‍ಡೌನ್ ವೇಳೆ ವಶಕ್ಕೆ ಪಡೆದ ವಾಹನಗಳ ಬಿಡುಗಡೆಗೆ ಪೊಲೀಸರಿಗೆ ಅಧಿಕಾರ ನೀಡಿ ಹೈಕೋರ್ಟ್ ಗ್ರೀನ್ ಸಿಗ್ನಲ್

 ಬೆಂಗಳೂರು, ಜೂನ್ 09, 2021 (ಕರಾವಳಿ ಟೈಮ್ಸ್) : ಲಾಕ್‍ಡೌನ್ ವೇಳೆ ಅನಾವಶ್ಯಕವಾಗಿ ರಸ್ತೆಗಿಳಿದ ಕಾರಣಕ್ಕೆ ಸೀಝ್ ಮಾಡಲಾಗಿದ್ದ ವಾಹನಗಳನ್ನು ರಿಲೀಸ್ ಮಾಡಲು ಪೊಲೀಸರಿಗೆ ಅಧಿಕಾರ ನೀಡಿ ಹೈಕೋರ್ಟ್ ಆದೇಶಿಸಿದೆ. ಪೊಲೀಸರು ಠಾಣೆಯಲ್ಲೇ ದಂಡ ಕಟ್ಟಿಸಿಕೊಂಡು ವಾಹನ ಮರಳಿಸಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

ವಾಹನ ಬಿಡುಗಡೆಗಾಗಿ ನ್ಯಾಯಾಲಯಕ್ಕೆ ಓಡಾಡುವ ಅಗತ್ಯವಿಲ್ಲ. ಈ ರೀತಿ ಅಲೆದಾಡುವ ಬದಲು ಪೊಲೀಸರೇ ಗಾಡಿಯನ್ನು ರಿಲೀಸ್ ಮಾಡಬಹುದು. ಪೊಲೀಸರಿಗೇ ವಾಹನ ರಿಲೀಸ್ ಅಧಿಕಾರ ನೀಡಲಾಗಿದೆ. ಲಾಕ್‍ಡೌನ್ ಸಂದರ್ಭದಲ್ಲಿ ರೂಲ್ಸ್ ಬ್ರೇಕ್ ಮಾಡಿ ರಸ್ತೆಗಿಳಿದಿದ್ದ ಲಕ್ಷಾಂತರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಾಹನ ನಿಲುಗಡೆಗೆ ಸ್ಥಳವಿಲ್ಲದೇ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಿರ್ದೇಶನ ಕೋರಿ ರಾಜ್ಯ ಹೈಕೋರ್ಟಿಗೆ ಸರಕಾರ ಅರ್ಜಿ ಸಲ್ಲಿಸಿತ್ತು. ಅದರಂತೆ ಇದೀಗ ಹೈ ಈ ಆದೇಶ ನೀಡಿದೆ.

  • Blogger Comments
  • Facebook Comments

0 comments:

Post a Comment

Item Reviewed: ಲಾಕ್‍ಡೌನ್ ವೇಳೆ ವಶಕ್ಕೆ ಪಡೆದ ವಾಹನಗಳ ಬಿಡುಗಡೆಗೆ ಪೊಲೀಸರಿಗೆ ಅಧಿಕಾರ ನೀಡಿ ಹೈಕೋರ್ಟ್ ಗ್ರೀನ್ ಸಿಗ್ನಲ್ Rating: 5 Reviewed By: lk
Scroll to Top