ಬಂಟ್ವಾಳ, ಜೂನ್ 03, 2021 (ಕರಾವಳಿ ಟೈಮ್ಸ್) : ತಾಲೂಕಿನ ಕೊರೋನಾ ಸೋಂಕಿತ ರೋಗಿಯೊಬ್ಬರಿಗೆ ಮೆಲ್ಕಾರಿನ ಮೆಡಿಕಲ್ ಮಾಲಕ ಗುರುವಾರ ಉಚಿತ ಔಷಧಿ ಒದಗಿಸಿ ಉಪಚರಿಸಿ ಮಾನವೀಯತೆ ಮೆರೆದಿದ್ದಾರೆ.
ಬಂಟ್ವಾಳ ತಾಲೂಕಿನ ಅತ್ಯಂತ ಬಡ ಕೊರೋನಾ ಸೋಂಕಿತರೋರ್ವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳುವ ಹಂತದಲ್ಲಿ ಔಷಧಿ ಖರೀದಿಸಲು ಅವರಲ್ಲಿ ಹಣವಿಲ್ಲದೆ ಪರಿತಪಿಸುತ್ತಿದ್ದರು. ಈ ಸಂದರ್ಭ ಸುದ್ದಿ ತಿಳಿದ ಪಾಣೆಮಂಗಳೂರಿನ ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ (ಎಚ್ ಆರ್ ಎಸ್) ಕಾರ್ಯಕರ್ತರು ಮೆಲ್ಕಾರಿನ ಪದ್ಮ ವಿಕಾಸ್ ಮೆಡಿಕಲ್ ಮಾಲಕ ರಾಜೇಂದ್ರ ಜೈನ್ ಅವರಿಗೆ ಮಾಹಿತಿ ನೀಡಿದ್ದಾರೆ. ರೋಗಿಯ ದಯನೀಯ ಪರಿಸ್ಥಿತಿ ಕಂಡು ಮರುಗಿದ ಅವರು ಒಂದು ತಿಂಗಳ ಅವಧಿಗಾಗುವ ಔಷಧಿಯನ್ನು ಉಚಿತವಾಗಿ ಒದಗಿಸಿ ಮಾನವೀಯ ಹೃದಯ ವೈಶಾಲ್ಯತೆ ಪ್ರದರ್ಶಿಸಿದ್ದಾರೆ.
0 comments:
Post a Comment