ಯುವ ಕಾಂಗ್ರೆಸ್ ವತಿಯಿಂದ ಜೂ 13 ರಂದು ಮೆಲ್ಕಾರಿನಲ್ಲಿ ರಕ್ತದಾನ ಶಿಬಿರ - Karavali Times ಯುವ ಕಾಂಗ್ರೆಸ್ ವತಿಯಿಂದ ಜೂ 13 ರಂದು ಮೆಲ್ಕಾರಿನಲ್ಲಿ ರಕ್ತದಾನ ಶಿಬಿರ - Karavali Times

728x90

12 June 2021

ಯುವ ಕಾಂಗ್ರೆಸ್ ವತಿಯಿಂದ ಜೂ 13 ರಂದು ಮೆಲ್ಕಾರಿನಲ್ಲಿ ರಕ್ತದಾನ ಶಿಬಿರ

ಬಂಟ್ವಾಳ, ಜೂನ್ 12, 2021 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಜೂನ್ 13 ರಂದು ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೆಲ್ಕಾರಿನ ಬಿರ್ವ ಸೆಂಟರಿನಲ್ಲಿ ನಡೆಯಲಿದೆ. 

 ಕೋವಿಡ್ ಸೋಂಕಿನ ಹಿನ್ನಲೆಯಲ್ಲಿ ರೋಗಿಗಳಿಗೆ ರಕ್ತದ ಕೊರತೆ ಬಾರದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಮಾನವೀಯತೆ ಹಾಗೂ ಸೌಹಾರ್ದತೆ ಸಾರುವ ಉದ್ದೇಶದಿಂದ ಈ ಶಿಬಿರವನ್ನು ಏರ್ಪಡಿಸಲಾಗಿದ್ದು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸುವಂತೆ ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ‌ ನವಾಝ್ ಬಡಕಬೈಲು ಹಾಗೂ ಪಾಣೆಮಂಗಳೂರು ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ಶರೀಫ್ ಭೂಯಾ ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಯುವ ಕಾಂಗ್ರೆಸ್ ವತಿಯಿಂದ ಜೂ 13 ರಂದು ಮೆಲ್ಕಾರಿನಲ್ಲಿ ರಕ್ತದಾನ ಶಿಬಿರ Rating: 5 Reviewed By: karavali Times
Scroll to Top