ಬಂಟ್ವಾಳ, ಜೂನ್ 17, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಂಟ್ವಾಳ-ವಿದ್ಯಾಗಿರಿ ಎಸ್ ವಿ ಎಸ್ ಕಾಲೇಜು ಬಳಿ ತಿರುವಿನಲ್ಲಿ ಗುರುವಾರ ಮುಂಜಾನೆ ಲಾರಿ ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದ ಪರಿಣಾಂ ಚಾಲಲ-ನಿರ್ವಾಹಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯಿಂದ ಅಕ್ಕಿ ಮೂಟೆಗಳನ್ನು ಹೇರಿಕೊಂಡು ಬಂದ ಲಾರಿ ವಿದ್ಯಾಗಿರಿ ಕಾಲೇಜು ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ಮೀರಿ ರಸ್ತೆ ಬಿಟ್ಟು ಬದಿಗೆ ಸಂಚರಿಸಿ ಧರೆಗೆ ಡಿಕ್ಕಿ ಹೊಡೆದು ನಿಂತಿದೆ.
ಅಪಘಾತದ ತೀವ್ರತೆಗೆ ಲಾರಿಯ ಮುಂಭಾಗ ಜಖಂಗೊಂಡಿದ್ದು, ಚಾಲಕ-ನಿರ್ವಾಹಕರಿಬ್ಬರೂ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
0 comments:
Post a Comment