ಬೆಂಗಳೂರು, ಜೂ. 02, 2021 (ಕರಾವಳಿ ಟೈಮ್ಸ್) : ಕೊರೋನಾ ಲಾಕ್ ಡೌನ್ ಕಾರಣದಿಂದ ಕೆಲಸವಿಲ್ಲದೆ ದಿನಸಿ ಸಾಮಾಗ್ರ ಅರಸಿ ಬಂದು ಬೆಂಗಳೂರಿನ ವಿಜಯನಗರ ಠಾಣೆ ಸಮೀಪ ನಿಂತುಕೊಂಡಿದ್ದ ಅಂಧ ದಂಪತಿಗೆ ಇಲ್ಲಿನ ಪಿಎಸ್ಐ ಮನು ಅವರು ದಿನಸಿ ಖರೀದಿಸಿ ಕೊಡುವ ಮೂಲಕ ನೆರವಾಗಿ ಮಾನವೀಯತೆಯ ಪರಾಕಾಷ್ಠೆ ಮೆರೆದಿದ್ದು, ಪೊಲೀಸ್ ಅಧಿಕಾರಿಯ ಕಾರುಣ್ಯ ಸೇವೆ ಇದೀಗ ಎಲ್ಲೆಡೆ ಶ್ಲಾಘನೆಗೆ ಒಳಗಾಗಿದೆ.
ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆ ಬಳಿ ಇಬ್ಬರು ಪುಟ್ಟ ಕಂದಮ್ಮಗಳನ್ನು ಹೆಗಲಲ್ಲಿರಿಸಿಕೊಂಡು ನಿಂತಿದ್ದ ಅಂಧ ದಂಪತಿಯನ್ನು ಕಂಡ ಪಿಎಸ್ಐ ಮನು ಅವರು ದಿನಸಿ ಪದಾರ್ಥ, ಮಕ್ಕಳಿಗೆ ಬೇಕಾದ ಔಷಧ ಸಹಿತ ಇತರ ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಪಿಎಸ್ ಐ ಮನು ಅವರ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಯಶವಂತಪುರದ ಆರ್ ಎಂಸಿ ಯಾರ್ಡ್ ಸಮೀಪದ ನಿವಾಸಿಗಳಾದ ಬಸವರಾಜು ಮತ್ತು ಚಿನ್ನಮ್ಮ ಅಂಧ ದಂಪತಿಗೆ ಎರಡು ವರ್ಷದ ಮತ್ತು ಆರು ತಿಂಗಳ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಇದ್ದ ದಂಪತಿಗೆ ವಿಜಯನಗರದಲ್ಲಿ ಯಾರೋ ದಿನಸಿ ನೀಡುತ್ತಿದ್ದಾರೆ ಎಂದು ಹೇಳಿದ್ದರಂತೆ. ಅದಕ್ಕಾಗಿ ವಿಜಯನಗರ ಬಂದಿದ್ದರು.
ವಿಜಯನಗರ ಠಾಣೆ ಹತ್ತಿರ ಬಂದ ದಂಪತಿಯನ್ನು ಕಂಡ ಪಿಎಸ್ ಐ ಮನು ಅವರ ಕಷ್ಟದ ಕಥೆ ಕೇಳಿ ಮೂರ್ನಾಲ್ಕು ತಿಂಗಳಿಗಾಗುವಷ್ಟು ದಿನಸಿ, ದಿನನಿತ್ಯದ ಅಗತ್ಯ ಸಾಮಗ್ರಿಗಳು, ಮಕ್ಕಳಿಗೆ ಔಷದೋಪಚಾರಕ್ಕೆ ವಸ್ತುಗಳನ್ನು ಖರೀದಿಸಿ ನೀಡುವ ಮೂಲಕ ತನ್ನ ಮನೋ ಔದಾರ್ಯ ಮೆರೆದು ಸಮಾಜಕ್ಕೆ ಮಾದರಿಯಾಗಿದ್ದಾರೆ.
0 comments:
Post a Comment