ವಿಜಯಪುರ, ಜೂನ್ 07, 2021 (ಕರಾವಳಿ ಟೈಮ್ಸ್) : ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಗಬೇನಾಳ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ನಾಗಬೇನಾಳ, ವೀರೇಶನಗರ ಮತ್ತು ಆರೇಶಂಕರ ಗ್ರಾಮದಲ್ಲಿ ಡಾ ಎಪಿಜೆ ಅಬ್ದುಲ್ ಕಲಾಂ ಅಭಿಮಾನಿ ಬಳಗದ ವತಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಣೆ ಮಾಡಲಾಯಿತು.
ಈ ಸಂದರ್ಭ ಡಾ ಎಪಿಜೆ ಅಬ್ದುಲ್ ಕಲಾಂ ಅಭಿಮಾನಿ ಬಳಗದ ಅಧ್ಯಕ್ಷ ಮೆಹಬೂಬ್ ಹೀರೇಮನಿ, ಪ್ರಮುಖರಾದ ಭೀಮನಗೌಡ ಪಾಟೀಲ, ಮೃತ್ಯುಂಜಯ್ಯ ಹೀರೆಮಠ, ಯಮನಪ್ಪ ಕೊಂಡಗೂಳಿ, ಮೈಬು ಖಾಜಿ, ಮಾನಪ್ಪ ನಾಗಬೇನಾಳ, ತಿಪ್ಪಣ್ಣ ಮಾದರ, ಗಂಗಪ್ಪ ಹುಡೇದ, ಮಾಳಪ್ಪ ಬಿರಾದಾರ, ಹಣಮಂತ ಗೌಂಡಿ, ಶೇಖಸಾಬ್ ನದಾಪ್ ಮೊದಲದವರು ಉಪಸ್ಥಿತರಿದ್ದರು.
0 comments:
Post a Comment