ಮಂಗಳೂರು, ಮೇ 04, 2021 (ಕರಾವಳಿ ಟೈಮ್ಸ್) : ನಗರದ ಶ್ರೀನಿವಾಸ ವಿಶ್ವವಿದ್ಯಾನಿಲಯದ ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್ ಆಂಡ್ ಕಾಮರ್ಸ್ ಇದರ 2020-21ನೇ ಸಾಲಿನ ಬಿಬಿಎ ಪದವಿ ಕೋರ್ಸಿನ ವಿದ್ಯಾರ್ಥಿಗಳ ರ್ಯಾಂಕ್ ಪಟ್ಟಿ ಪ್ರಕಟಗೊಂಡಿದೆ.
ಹಾನರ್ಸ್ ವಿಭಾಗದ ವಿದ್ಯಾರ್ಥಿ ಮೇಧ ಭಟ್ 9.85 ಸಿಜಿಪಿಎ ಹಾಗೂ ಲಾಜಿಸ್ಟಿಕ್ ಆಂಡ್ ಸಪ್ಲೈ ಚೈನ್ ಮ್ಯಾನೇಜ್‍ಮೆಂಟ್ ವಿಭಾಗದ ಆರ್ಯ ಜೆ. 9.39 ಸಿಜಿಪಿಎಯೊಂದಿಗೆ ಪ್ರಥಮ ರ್ಯಾಂಕ್ ಹಾಗೂ ಚಿನ್ನದ ಪದಕ, ಹಾನರ್ಸ್ ವಿಭಾಗದ ವಿದ್ಯಾರ್ಥಿಗಳಾದ ಆಕಾಶ್ ಸನಿಲ್ 9.0 ಸಿ.ಜಿ.ಪಿ.ಎ.ಯೊಂದಿಗೆ ದ್ವಿತೀಯ ರ್ಯಾಂಕ್, ನಿಧಿ ಖಾಡೆ 8.86 ಸಿ.ಜಿ.ಪಿ.ಎ.ಯೊಂದಿಗೆ ತೃತೀಯ ರ್ಯಾಂಕ್, ತೇಜಸ್ ಕುಮಾರ್ 8.67 ಸಿ.ಜಿ.ಪಿ.ಎ.ಯೊಂದಿಗೆ ನಾಲ್ಕನೇ ರ್ಯಾಂಕ್ ಹಾಗೂ ಪಿ.ಪಿ. ದಿಲ್ನ 8.55 ಸಿ.ಜಿ.ಪಿ.ಎ.ಯೊಂದಿಗೆ 5ನೇ ರ್ಯಾಂಕ್ ಪಡೆದಿರುತ್ತಾರೆ ಎಂದು ಸಿಎಂಸಿ ಡೀನ್ ಪೆÇ್ರ. ಕೀರ್ತನ್ ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment