ಬಂಟ್ವಾಳ, ಮೇ 10, 2021 (ಕರಾವಳಿ ಟೈಮ್ಸ್) : ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನಾ ಪೀಡಿತ ಮನೆಗಳಿಗೆ ಮಂಗಳೂರು ಶಾಸಕ ಯು ಟಿ ಖಾದರ್ ಹಾಗೂ ಜಿ ಪಂ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ ಅವರ ನೇತೃತ್ವದಲ್ಲಿ ಯುಟಿಕೆ ಕೋವಿಡ್-19 ಹೆಲ್ಪ್ ಲೈನ್ 24*7 ಹಾಗೂ ಪುದು ಯುವ ಕಾಂಗ್ರೆಸ್ ವತಿಯಿಂದ ಸೋಮವಾರ ರೇಶನ್ ಕಿಟ್ ವಿತರಿಸಲಾಯಿತು.
ಈ ಸಂದರ್ಭ ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ಲೀಡಿಯ ಪಿಂಟೋ, ಪುದು ವಲಯ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಪೇರಿಮಾರ್, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಜೀದ್ ಪೇರಿಮಾರ್, ಮಂಗಳೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಮುಖಂಡ ಹಿಶಾಂ ಫರಂಗಿಪೇಟೆ, ಪುದು ಯುವ ಕಾಂಗ್ರೆಸ್ ಅಧ್ಯಕ್ಷ ನಿಝಾಂ ಕುಂಜತ್ಕಲ, ಪುದು ಪಂಚಾಯತ್ ಸದಸ್ಯರುಗಳಾದ ಇಕ್ಬಾಲ್ ಸುಜೀರ್, ಕಿಶೋರ್ ಸುಜೀರ್, ಮುಮ್ತಾಝ್ ಸುಜೀರ್, ಪುದು ಯುವ ಕಾಂಗ್ರೆಸ್ ಸದಸ್ಯ ಇನ್ಶಾದ್ ಮಾರಿಪಳ್ಳ, ರಿಳ್ವಾನ್ ಅಮೆಮಾರ್, ಪಶ್ವತ್ ಫರಂಗಿಪೇಟೆ, ಹಕೀಂ ಉರ್ವ, ಅಬ್ದುಲ್ ಘನಿ ಮಾರಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment