ಬಂಟ್ವಾಳ, ಮೇ 04, 2021 (ಕರಾವಳಿ ಟೈಮ್ಸ್) : ವಿಟ್ಲದ ಸಿಂಡಿಕೇಟ್ ಬ್ಯಾಂಕಿನ ನಾಲ್ಕು ಮಂದಿ ಸಿಬ್ಬಂದಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದು, ಬ್ಯಾಂಕ್ ಬಂದ್ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಇಲ್ಲಿನ ಓರ್ವ ಸಿಬ್ಬಂದಿಗೆ ಸೋಂಕು ವಕ್ಕರಿಸಿತ್ತು. ಬಳಿಕ ಅವರ ಮನೆ ಮಂದಿಗೆಲ್ಲಾ ಸೋಂಕು ಪತ್ತೆಯಾಗಿತ್ತು. ಇದರಿಂದಾಗಿ ಬ್ಯಾಂಕಿನ ಉಳಿದ ಸಿಬ್ಬಂದಿಗಳು ಪರೀಕ್ಷೆ ನಡೆಸಿದಾಗ ಅವರಿಗೂ ಪಾಸಿಟಿವ್ ದೃಢಪಟ್ಟಿತ್ತು. ಬಳಿಕ ಬ್ಯಾಂಕ್ ಮೆನೇಜರ್ ಒಬ್ಬರೇ ಬ್ಯಾಂಕಿನಲ್ಲಿ ಕೆಲ ದಿನ ಕಾರ್ಯನಿರ್ವಹಿಸಿದ್ದರು. ಇದೀಗ ಮ್ಯಾನೇಜರ್ ಅವರಿಗೂ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ಬ್ಯಾಂಕ್ ಶಾಖೆ, ಎಟಿಎಂ ಎಲ್ಲವನ್ನೂ ಬಂದ್ ಮಾಡಲಾಗಿದೆ. ಇತ್ತೀಚೆಗೆ ಬ್ಯಾಂಕ್ ಸಂಪರ್ಕಿಸಿರುವ ಗ್ರಾಹಕರು ತಪಾಸಣೆಗೆ ಒಳಪಡುವಂತೆ ಸೂಚಿಸಲಾಗಿದೆ.
0 comments:
Post a Comment