ನವದೆಹಲಿ, ಮೇ 02, 2021 (ಕರಾವಳಿ ಟೈಮ್ಸ್) : ಕೋವಿಡ್ ಅಬ್ಬರದ ನಡುವೆ ನಡೆದ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಭಾನುವಾರ ಪ್ರಕಟಗೊಂಡಿದೆ. ಸಂಪೂರ್ಣ ಫಲಿತಾಂಶ ಲಭ್ಯವಾಗದಿದ್ದರೂ ಸಂಜೆಯ ವೇಳೆಗೆ ರಾಜ್ಯಗಳ ಅಧಿಕಾರ ಚುಕ್ಕಾಣಿ ಯಾರ ಕೈಗೆ ಎಂಬ ಸ್ಪಷ್ಪ ಫಲಿತಾಂಶ ಲಭ್ಯವಾಗುತ್ತಿದೆ.
ಮೋದಿ-ದೀದಿ ನಡುವೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟು ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸ್ಪಷ್ಟ ಮೇಲುಗೈ ಸಾಧಿಸಿದ್ದಾರೆ. 200ಕ್ಕೂ ಅಧಿಕ ಸ್ಥಾನಗಳಲ್ಲಿ ಪ್ರಾಬಲ್ಯ ಮೆರೆದು ಮತ್ತೆ ಅಧಿಕಾರದತ್ತ ಮುನ್ನುಗ್ಗಿದ್ದಾರೆ.
ಬಿಜೆಪಿ ಕೇಂದ್ರ ಹಾಗೂ ವಿವಿಧ ರಾಜ್ಯದ ಘಟನಾನುಘಟಿ ನಾಯಕರ ಅಬ್ಬರದ ಪ್ರಚಾರದಿಂದಾಗಿ ಬಂಗಾಳದಲ್ಲಿ ಒಂದು ರೀತಿಯ ರಾಜಕೀಯ ಯುದ್ದದ ಸನ್ನಿವೇಶ ನಿರ್ಮಾಣವಾಗಿತ್ತು. ಹೇಗಾದರೂ ಮಾಡಿ ದೀದಿಗೆ ಗತಿ ಕಾಣಿಸಿಯೇ ಸಿದ್ದ ಎಂದು ಕಣಕ್ಕಿಳಿದಿದ್ದ ಬಿಜೆಪಿ ನಾಯಕರಿಗೆ ಪಶ್ಚಿಮ ಬಂಗಾಳದ ಜನತೆ ಯಾವುದೇ ಮಹತ್ವ ನೀಡದ ಪರಿಣಾಮ ಬಿಜೆಪಿ ಪ್ರಾರಂಭಿಕ ಹಂತದಲ್ಲಿ ಟಿಎಂಸಿಗೆ ಭರ್ಜರಿ ಪೈಪೆÇೀಟಿಯನ್ನೇ ನೀಡಿತ್ತಾದರೂ ಕ್ರಮೇಣ ತನ್ನ ಮುನ್ನಡೆಯ ಅಂತರವನ್ನು ಕಳೆದುಕೊಳ್ಳಲಾರಂಭಿಸಿತು. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮ್ಯಾಜಿಕ್ ನಂಬರ್ ಸಮೀಪಿಸಿದ್ದು, ಮೂರನೇ ಬಾರಿಗೆ ಅಧಿಕಾರ ಪಡೆದಿದೆ. ಬಿಜೆಪಿ ತನ್ನ ಬಲ ಹೆಚ್ಚಿಸಿಕೊಂಡ ಬಗ್ಗೆ ತೃಪ್ತಿಪಟ್ಟುಕೊಂಡಿದೆ. ನೆಲೆಯೇ ಇಲ್ಲದ ರಾಜ್ಯದಲ್ಲಿ ಈ ಬಾರಿ ಟಿಎಂಸಿಗೆ ಪ್ರಬಲ ಪೈಪೆÇೀಟಿ ನೀಡಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ತಮಿಳುನಾಡಿನಲ್ಲೂ ಬಿಜೆಪಿಗೆ ಮತದಾರ ಸೈ ಎಂದಿಲ್ಲ. ಆದರೆ ಆಡಳಿತಾರೂಢ ಎಐಎಡಿಎಂಕೆ ಆಡಳಿತ ವಿರೋಧಿ ಅಲೆಗೆ ಸಿಲುಕಿದ್ದು, ಈ ಬಾರಿ ಮತದಾರ ಡಿಎಂಕೆ ಕೈ ಹಿಡಿದಿದ್ದಾನೆ.
ಕೇರಳದಲ್ಲಿ ಆಡಳಿತಾರೂಢ ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್ 140 ಕ್ಷೇತ್ರಗಳ ಪೈಕಿ 89 ರಲ್ಲಿ ಮುನ್ನಡೆಯಲ್ಲಿದ್ದು ಬಹುಮತ ಪಡೆಯುವ ಎಲ್ಲಾ ಸಾಧ್ಯತೆಗಳೂ ಇವೆ. ವಿಪಕ್ಷ ಯುಡಿಎಫ್ 45 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಅಸ್ಸಾಂನ 126 ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಎನ್‍ಡಿಎ 79 ರಲ್ಲಿ ಮುನ್ನಡೆಯಲ್ಲಿದ್ದರೆ, ಯುಪಿಎ 46 ರಲ್ಲಿ ಇತರರು ಒಂದರಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ಎನ್‍ಡಿಎ ಅಧಿಕಾರ ಹಿಡಿಯುವತ್ತ ದಾಪುಗಾಲು ಇಟ್ಟಿದೆ.
30 ಕ್ಷೇತ್ರಗಳಿರುವ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಇತ್ತೀಚಿನ ವರದಿಯ ಪ್ರಕಾರ ಎನ್‍ಆರ್‍ಸಿ ಮೈತ್ರಿಕೂಟ 11 ರಲ್ಲಿ, ಯುಪಿಎ 6 ರಲ್ಲಿ ಮುನ್ನಡೆಯಲ್ಲಿವೆ. ಎಲ್ಲಾ ರಾಜ್ಯಗಳ ಅಂತಿಮ ಹಾಗೂ ಸ್ಪಷ್ಟ ಫಲಿತಾಂಶ ಇನ್ನಷ್ಟೆ ಲಭ್ಯವಾಗಬೇಕಿದೆ.
0 comments:
Post a Comment