ಬಂಟ್ವಾಳ, ಮೇ 14, 2021 (ಕರಾವಳಿ ಟೈಮ್ಸ್) : ಕರ್ನಾಟಕ ಮುಸ್ಲಿಂ ಜಮಾಅತ್ ಬಂಟ್ವಾಳ ಸರ್ಕಲ್ “ಸಹಾಯಿ” ತುರ್ತು ಸೇವಾ ತಂಡದ ವತಿಯಿಂದ ಈದುಲ್ ಪಿತ್ರ್ ಹಬ್ಬದ ಪ್ರಯುಕ್ತ ಬಂಟ್ವಾಳ ಅಸುಪಾಸಿನಲ್ಲಿರುವ ಪ್ರಮುಖ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಿಗೆ ಮತ್ತು ರಾತ್ರಿ ಹಗಲೆನ್ನದೇ ಸಾರ್ವಜನಿಕರ ಸುರಕ್ಷತೆಗಾಗಿ ಕಾರ್ಯ ನಿರ್ವಹಿಸುವ ಪೆÇೀಲೀಸ್ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕ ಸೇವೆಗೈಯ್ಯುವ ಉದ್ಯೋಗಸ್ಥರಿಗೆ ವಿಶೇಷ ಈದ್ ಫುಡ್ ವಿತರಿಸುವ ಮೂಲಕ ಈದುಲ್ ಪಿತ್ರ್ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು
ಕೋವಿಡ್-19 ಎಂಬ ಮಹಾಮಾರಿ ರೋಗವು ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಈ ಸಂದರ್ಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ “ಸಹಾಯ್” ಎಂಬ ತುರ್ತು ಸೇವಾ ತಂಡವನ್ನು ರಚಿಸಿ ಕರ್ನಾಟಕ ರಾಜ್ಯಾದ್ಯಂತ ಅನೇಕ ಜನಪರ ಕಾರ್ಯಗಳನ್ನು ನಡೆಸುತ್ತಾ ಬಂದಿರುತ್ತದೆ. ಅಂಬುಲೆನ್ಸ್ ಸೇವೆ, ಕೋವಿಡ್ ವೈರಸ್ಸಿನಿಂದ ಮರಣ ಹೊಂದಿದವರಿಗೆ ಅವರವರ ದರ್ಮಗಳ ವಿಧಿ ವಿಧಾನಗಳನ್ನು ಅನುಸರಿಸಿ ಅಂತ್ಯಕ್ರಿಯೆ ನಡೆಸಲು ತರಬೇತಿ ಪಡೆದ ಕೋವಿಡ್ ವಾರಿಯರ್ಸ್‍ಗಳು, ವಿವಿಧ ಔಷಧೀಯ ಸೇವೆ, ಜನಜಾಗೃತಿ ಶಿಬಿರಗಳು, ಮಾಸ್ಕ್ ವಿತರಣೆ, ಪವಿತ್ರ ರಮಳಾನ್ ತಿಂಗಳಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಇರುವ ವೃತಸ್ಥರಿಗೆ ಇಪ್ತಾರ್ ಮತ್ತು ಸಹರಿ ವ್ಯವಸ್ಥೆ ಇನ್ನಿತರ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ.
ಪ್ರಸ್ತುತ ಬಂಟ್ವಾಳ ತಾಲೂಕು “ಸಹಾಯಿ” ತಂಡದ ಈ ವಿಶೇಷ ಈದ್ ಆಚರಣೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಎನ್.ಕೆ.ಎಂ. ಶಾಫಿ ಸಅದಿ ಬೆಂಗಳೂರು, ಕೆಸಿಎಫ್ ರಿಯಾದ್ ಘಟಕದ ಹಂಝ ಮೈಂದಾಳ, ತಾಲೂಕು ಕಾರ್ಯದರ್ಶಿಗಳಾದ ಬಶೀರ್ ಹಾಜಿ ಮಿತ್ತಬೈಲ್, ರಶೀದ್ ಹಾಜಿ ವಗ್ಗ, “ಸಹಾಯಿ” ಬಂಟ್ವಾಳ ಸರ್ಕಲ್ ನಾಯಕರಾದ ಸೆರ್ಕಳ ಇಬ್ರಾಹಿಂ ಸಖಾಫಿ, ಎಸ್.ವೈ.ಎಸ್. ನಾಯಕರಾದ ರಫೀಕ್ ಹಾಜಿ ಕಿಸ್ವ, ಎಸ್ಸೆಸ್ಸೆಫ್ ವೆಸ್ಟ್ ಜಿಲ್ಲಾ ಕಾರ್ಯದರ್ಶಿ ಇರ್ಶಾದ್ ಹಾಜಿ ಗೂಡಿನಬಳಿ, ಶರೀಫ್ ನಂದಾವರ, ಹಂಝ ಮಂಚಿ, ಬಂಟ್ವಾಳ ಡಿವಿಷನ್ ಪ್ರಧಾನ ಕಾರ್ಯದರ್ಶಿ ಅಸ್ಲಂ ಸಂಪಿಲ, ಅಮೀರ್ ಬೋಳಂತೂರು, ಸಿದ್ದೀಕ್ ನಂದಾವರ ತಾಜುಲ್ ಉಲಮಾ ರಿಲೀಫ್ ಸೆಲ್ ವಗ್ಗ ಇದರ ಚೆಯರ್‍ಮೆನ್ ಮುಹಮ್ಮದ್ ಇಕ್ಬಾಲ್ ವಗ್ಗ ಮೊದಲಾವರು ಉಪಸ್ಥಿರಿದ್ದರು.
0 comments:
Post a Comment