ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೈವ ನರ್ತಕರಿಗೆ, ಸಹಾಯಕರಿಗೆ, ಸೇವಕರ ಕುಟುಂಬಕ್ಕೆ ರೇಶನ್ ಕಿಟ್ ವಿತರಣೆ - Karavali Times ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೈವ ನರ್ತಕರಿಗೆ, ಸಹಾಯಕರಿಗೆ, ಸೇವಕರ ಕುಟುಂಬಕ್ಕೆ ರೇಶನ್ ಕಿಟ್ ವಿತರಣೆ - Karavali Times

728x90

30 May 2021

ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೈವ ನರ್ತಕರಿಗೆ, ಸಹಾಯಕರಿಗೆ, ಸೇವಕರ ಕುಟುಂಬಕ್ಕೆ ರೇಶನ್ ಕಿಟ್ ವಿತರಣೆ

ಉಡುಪಿ, ಮೇ 30, 2021 (ಕರಾವಳಿ ಟೈಮ್ಸ್) : ಕೊರೋನಾ ಮಹಾಮಾರಿ ಶ್ರೀಮಂತ-ಬಡವರೆನ್ನದೆ ಎಲ್ಲರಿಗೂ ಕಾಡಿದೆ. ದುಡಿದು ತಿನ್ನುವ ಕೈಗಳಿಗೆ, ಬಡ ಜನರಿಗೆ ಕೊರೋನಾ ಭಾರೀ ಕಷ್ಟ ನೀಡಿದೆ. ಇದು ತುಳುನಾಡಿನ ಪ್ರಮುಖ ಸಂಪ್ರದಾಯವಾದ ಭೂತರಾಧನೆಯವರನ್ನೂ ಬಿಟ್ಟಿಲ್ಲ. ತುಳುನಾಡಿನಲ್ಲಿ ಸದ್ಯ ಕೊರೊನಾ ಹಿನ್ನಲೆಯಲ್ಲಿ ಎಲ್ಲಿಯೂ ದೈವಾರಾಧನೆ ನಡೆಯುತ್ತಿಲ್ಲ. ಈ ಹಿನ್ನಲೆಯಲ್ಲಿ ದೈವ ನರ್ತನ ಕಾರ್ಯವನ್ನು ಮಾಡುವ ಹಾಗೂ ದೈವದ ಚಾಕರಿಯನ್ನು ಮಾಡುವ ಹಿರಿಯಡ್ಕ ಪರಿಸರದ ಸುಮಾರು 20 ಕುಟುಂಬಗಳಿಗೆ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ತಲಾ 10 ಕೆಜಿ ಅಕ್ಕಿ ಹಾಗೂ ಒಂದು ಸಾವಿರ ರೂಪಾಯಿ ಮೌಲ್ಯದ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. 


    ಕೊರೋನಾ ಮಹಾಮಾರಿಯಿಂದ ನೇಮೋತ್ಸವ ನಡೆಯುವ ಈ ಸಮಯದಲ್ಲಿ ನೇಮೋತ್ಸವವಿಲ್ಲದೆ ಅದನ್ನೇ ನಂಬುತ್ತಿರುವ ಕುಟುಂಬಗಳು ಬಹಳ ಕಷ್ಟದಲ್ಲಿದೆ. ಹಾಗಾಗಿ ಅವರ ಕಷ್ಟದ ಸಮಯದಲ್ಲಿ ಅವರು ನೇಮ ಕಟ್ಟುವ ಮನೆಯವರು ಅವರೊಂದಿಗಿದ್ದು ಅವರ ಕಷ್ಟದಲ್ಲಿ ಭಾಗಿಗಳಾಗಬೇಕೆಂದು ಆಶಿಸಿ ಟ್ರಸ್ಟ್ ಅಧ್ಯಕ್ಷ ಅನಂತ ಇನ್ನಂಜೆ ಅವರು ಆಹಾರ ಕಿಟ್‍ಗಳನ್ನು ವಿತರಿಸಿದರು.


    ಈ ಸಂದರ್ಭ ಟ್ರಸ್ಟ್ ಕಾರ್ಯದರ್ಶಿಗಳಾದ ಅನಿಲ್ ಆಚಾರ್ಯ ಓಂತಿಬೆಟ್ಟು, ಪುನೀತ್ ಕುಲಾಲ್ ಮಜೂರು, ವಿಕಾಸ್ ದೇವಾಡಿಗ ಮಜೂರು, ಶಿವು ಮಜೂರು ಮೊದಲಾದವರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೈವ ನರ್ತಕರಿಗೆ, ಸಹಾಯಕರಿಗೆ, ಸೇವಕರ ಕುಟುಂಬಕ್ಕೆ ರೇಶನ್ ಕಿಟ್ ವಿತರಣೆ Rating: 5 Reviewed By: karavali Times
Scroll to Top