ನೆಹರೂ ಪುಣ್ಯತಿಥಿ ಅಂಗವಾಗಿ ಯುಟಿಕೆ ಹೆಲ್ಪ್ ಲೈನ್ ವತಿಯಿಂದ ಮಾಸ್ಕ್ ವಿತರಣೆ - Karavali Times ನೆಹರೂ ಪುಣ್ಯತಿಥಿ ಅಂಗವಾಗಿ ಯುಟಿಕೆ ಹೆಲ್ಪ್ ಲೈನ್ ವತಿಯಿಂದ ಮಾಸ್ಕ್ ವಿತರಣೆ - Karavali Times

728x90

28 May 2021

ನೆಹರೂ ಪುಣ್ಯತಿಥಿ ಅಂಗವಾಗಿ ಯುಟಿಕೆ ಹೆಲ್ಪ್ ಲೈನ್ ವತಿಯಿಂದ ಮಾಸ್ಕ್ ವಿತರಣೆ

ಬಂಟ್ವಾಳ, ಮೇ 28, 2021 (ಕರಾವಳಿ ಟೈಮ್ಸ್) : ಭಾರತದ ಪ್ರಥಮ ಪ್ರಧಾನ ಮಂತ್ರಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯ ತಿಥಿ ಅಂಗವಾಗಿ ಯು ಟಿ ಕೆ ಹೆಲ್ಪ್ ಲೈನ್ 24*7, ಪುದು ಯುವ ಕಾಂಗ್ರೆಸ್, ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಜಿಲ್ಲಾ ಎನ್ ಎಸ್ ಯು ಐ ವತಿಯಿಂದ 400 ಎನ್95 ಮಾಸ್ಕ್ ನಿರ್ಗತಿಕರಿಗೆ, ಬಡ ಜನರಿಗೆ, ಪೆÇಲೀಸ್ ಇಲಾಖೆಗೆ ವಿತರಿಸಲಾಯಿತು.


    ಈ ಸಂದರ್ಭ ಜಿ ಪಂ ಮಾಜಿ ಸದಸ್ಯ ಹಾಗೂ ಡಿಸಿಸಿ ಪ್ರದಾನ ಕಾರ್ಯದರ್ಶಿ ಉಮ್ಮರ್ ಫಾರೂಕ್ ಫರಂಗಿಪೇಟೆ, ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಜಿಲ್ಲಾ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ದೀಕ್ಷಿತ್ ಅತ್ತಾವರ, ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಜೀದ್ ಪೇರಿಮಾರ್, ಪುದು ಯುವ ಕಾಂಗ್ರೆಸ್ ಅಧ್ಯಕ್ಷ ನಿಝಾಂ ಕುಂಜತ್ತಕಲ್, ಯುವ ಕಾಂಗ್ರೆಸ್ ಮುಖಂಡರಾದ ಇಶಾಂ ಫರಂಗಿಪೇಟೆ, ಫಯಾಝ್ ಅಮೆಮರ್, ಯೇನಪೋಯ ಕಾಲೇಜ್ ಎನ್ ಎಸ್ ಯು ಐ ಅಧ್ಯಕ್ಷ ರಿಲ್ವಾನ್ ಅಮೆಮಾರ್, ಎನ್ ಎಸ್ ಯು ಐ ಪ್ರಮುಖ ಶಫೀಕ್ ಮೊದಲಾದವರು ಜೊತೆಗಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ನೆಹರೂ ಪುಣ್ಯತಿಥಿ ಅಂಗವಾಗಿ ಯುಟಿಕೆ ಹೆಲ್ಪ್ ಲೈನ್ ವತಿಯಿಂದ ಮಾಸ್ಕ್ ವಿತರಣೆ Rating: 5 Reviewed By: karavali Times
Scroll to Top