ಬಂಟ್ವಾಳ, ಮೇ 15, 2021 (ಕರಾವಳಿ ಟೈಮ್ಸ್) : ರಂಝಾನ್ ಹಬ್ಬದ ಪ್ರಯುಕ್ತ ಯು ಟಿ ಖಾದರ್ ಹೆಲ್ಪ್ ಲೈನ್ ಹಾಗೂ ಐವೈಸಿ ಪುದು ಇದರ ವತಿಯಿಂದ ನಿರಾಶ್ರಿತರಿಗೆ ಮಂಗಳೂರು ಹಾಗೂ ಬಿ ಸಿ ರೋಡ್ ಪರಿಸರದಲ್ಲಿ ಫುಡ್ ಕಿಟ್ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಜಿ ಪಂ ಮಾಜಿ ಸದಸ್ಯ ಉಮರ್ ಫಾರೂಕ್ ಕೊರೋನಾ ಲಾಕ್ ಡೌನ್ ಅವಧಿಯಲ್ಲಿ ಹೋಟೆಲ್‍ಗಳು ಹಾಗೂ ಇನ್ನಿತರ ಆಹಾರ ಮೂಲಗಳು ಸಂಪೂರ್ಣ ಬಂದ್ ಆಗಿದ್ದು, ಇದರಿಂದಾಗಿ ಹಲವು ಮಂದಿ ಬಡ ನಿರಾಶ್ರಿತ ಜನ ಹೊಟ್ಟೆಗೆ ಆಹಾರವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಬಡವರಿಗೆ ಸರಕಾರ ಯಾವುದೇ ರೀತಿಯ ಪ್ಯಾಕೇಜ್ ಘೋಷಿಸದೆ ದಿಢೀರ್ ಆಗಿ ಲಾಕ್ ಡೌನ್ ಮಾಡಿದ ಪರಿಣಾಮ ಬಡವರ ಹೊಟ್ಟೆಗೆ ಹಿಟ್ಟಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಸರಕಾರ ತಕ್ಷಣ ಬಡವರ ಪರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರಲ್ಲದೆ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಕೊರೋನಾ ಮಹಾಮಾರಿ ಶೀಘ್ರ ನಿರ್ನಾಮವಾಗಲಿ. ಈ ರೋಗಕ್ಕೆ ತುತ್ತಾಗಿ ಮರಣ ಹೊಂದಿರುವವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಆ ದೇವರು ನೀಡಲಿ ಎಂದವರು ಹಾರೈಸಿದರು.
ಈ ಸಂಧರ್ಭ ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ಲೀಡಿಯ ಪಿಂಟೋ, ಯುವ ಕಾಂಗ್ರೆಸ್ ಕಾರ್ಯದರ್ಶಿ ದೀಕ್ಷಿತ್ ಅತ್ತಾವರ, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಜೀದ್ ಪೇರಿಮಾರ್, ಯುವ ಕಾಂಗ್ರೆಸ್ ಮುಖಂಡ ಹಿಶಾಂ ಫರಂಗಿಪೇಟೆ, ಪುದು ಯುವ ಕಾಂಗ್ರೆಸ್ ಅಧ್ಯಕ್ಷ ನಿಝಾಂ ಕುಂಜತ್ಕಲ, ಎನ್.ಎಸ್.ಯು.ಐ. ಪ್ರಮುಖ ರಿಳ್ವಾನ್ ಮಾರಿಪಳ್ಳ, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಶಾಹಿಲ್ ಆರ್.ಎಸ್., ಸಾಮಾಜಿಕ ಜಾಲ ತಾಣ ಸಹ ಸಂಚಾಲಕ ಸಮೀಝ್ ಫರಂಗಿಪೇಟೆ, ಸಲ್ಮಾನ್ ಶರೀಫ್, ಯುವ ಕಾಂಗ್ರೆಸ್ ಮುಖಂಡರುಗಳಾದ ಇರ್ಶಾದ್ ಮಾರಿಪಳ್ಳ, ಫ್ಯಾಸ್ವತ್, ತಾಸಿಕ್ ಸಲ್ಮಾನ್, ಹಿಶಾಂ ಕುಂಜತ್ಕಳ ಮೊದಲಾದವರು ಜೊತೆಗಿದ್ದರು.
0 comments:
Post a Comment