ಮಂಗಳೂರು, ಮೇ 06, 2021 (ಕರಾವಳಿ ಟೈಮ್ಸ್) : ನಗರದ ಶ್ರೀನಿವಾಸ ವಿಶ್ವವಿದ್ಯಾನಿಲಯದ ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್ ಆಂಡ್ ಕಾಮರ್ಸ್ ಇದರ 2020-21ನೇ ಸಾಲಿನ ಬಿ.ಕಾಂ ಪದವಿ ಕೋರ್ಸಿನ ವಿದ್ಯಾರ್ಥಿಗಳ ರ್ಯಾಂಕ್ ಪಟ್ಟಿ ಪ್ರಕಟಗೊಂಡಿದೆ.
ಬಿ. ಕಾಂ. ಕಾರ್ಪರೇಟ್ ಆಡಿಟಿಂಗ್ ವಿಭಾಗದ ವಿದ್ಯಾರ್ಥಿ ಅನರ್ಘ ರಾಜೀವ್ 9.42 ಸಿಜಿಪಿಎಯೊಂದಿಗೆ ಪ್ರಥಮ ರ್ಯಾಂಕ್ ಹಾಗೂ ಚಿನ್ನದ ಪದಕವನ್ನು ಪಡೆದಿದ್ದಾರೆ. ಬಿ.ಕಾಂ. ಹಾನರ್ಸ್ ವಿಭಾಗದ ವಿದ್ಯಾರ್ಥಿಗಳಾದ ಶೃತಿ ಎಂ. 8.93 ಸಿ.ಜಿ.ಪಿ.ಎ.ಯೊಂದಿಗೆ ಪ್ರಥಮ ರ್ಯಾಂಕ್, ಅಬ್ದುಲ್ ರಹಿಮಾನ್ 8.90 ಸಿ.ಜಿ.ಪಿ.ಎ.ಯೊಂದಿಗೆ ದ್ವಿತೀಯ ರ್ಯಾಂಕ್, ಬ್ರಾಂಡನ್ ಡ್ಯಾನಿಲ್ ಡಿ’ಕೋಸ್ತ 8.80 ಸಿ.ಜಿ.ಪಿ.ಎ.ಯೊಂದಿಗೆ ತೃತೀಯ ರ್ಯಾಂಕ್ ಪಡೆದಿದ್ದಾರೆ.
ಬಿಕಾಂ ಎಸಿಸಿಎ ವಿಭಾಗದ ವಿದ್ಯಾರ್ಥಿ ಕೃತಿಕಾ 9.18 ಸಿ.ಜಿ.ಪಿ.ಎ.ಯೊಂದಿಗೆ ಹಾಗೂ ಬಿಕಾಂ ಏವಿಯೇಷನ್ ಮ್ಯಾನೇಜ್‍ಮೆಂಟ್ ವಿಭಾಗದ ವಿದ್ಯಾರ್ಥಿ ಹಸ್ನ ಹರಿ 9.08 ಸಿ.ಜಿ.ಪಿ.ಎ.ಯೊಂದಿಗೆ ಪ್ರಥಮ ರ್ಯಾಂಕ್‍ಗಳನ್ನು ಪಡೆದಿರುತ್ತಾರೆ ಎಂದು ಸಿಎಂಸಿ ಡೀನ್ ಪೆÇ್ರ. ಕೀರ್ತನ್ ರಾಜ್ ತಿಳಿಸಿದ್ದಾರೆ.
0 comments:
Post a Comment