ನವದೆಹಲಿ, ಮೇ 03, 2021 (ಕರಾವಳಿ ಟೈಮ್ಸ್) : ಬಟ್ಲರ್ ಅವರ ಬಿರುಸಿನ ಬ್ಯಾಟಿಂಗ್ ಹಾಗೂ ಮುಸ್ತುಪಿಝರ್ರಹ್ಮಾನ್, ಕ್ರೀಸ್ ಮೋರಿಸ್ ಕರಾರುವಾಕ್ ದಾಳಿಗೆ ಕಕ್ಕಾಬಿಕ್ಕಿಯಾದ ಸನ್ ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ್ ತಂಡಕ್ಕೆ 55 ರನ್ ಗಳಿಂದ ಶರಣಾಗಿದೆ.
ಐಪಿಎಲ್ 14ನೇ ಆವೃತ್ತಿಯ ಭಾನುವಾರ ಸಂಜೆ ನಡೆದ ಮೊದಲ ಪಂದ್ಯದಲ್ಲಿ ಗೆಲ್ಲಲು 221 ರನ್‍ಗಳ ಬೃಹತ್ ಮೊತ್ತದ ಸವಾಲು ಪಡೆದ ಹೈದರಾಬಾದ್ ತಂಡ ನಿಗದಿತ 20 ಓವರ್‍ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿ ಸೋಲೊಪ್ಪಿಕೊಂಡಿತು. ರಾಜಸ್ಥಾನ್ ಪರ ಮಾರಕದಾಳಿ ನಡೆಸಿದಮುಸ್ತುಪಿಝರ್ರಹ್ಮಾನ್, ಕ್ರೀಸ್ ಮೋರಿಸ್ ತಲಾ 3 ವಿಕೆಟ್ ಕಬಳಿಸಿ ಹೈದ್ರಾಬಾದ್ ತಂಡದ ಬೆನ್ನೆಲುಬನ್ನೇ ಮುರಿದು ಹಾಕಿದರು.
ಹೈದರಾಬಾದ್ ಪರ ಆರಂಭಿಕ ಆಟಗಾರರಾದ ಮನೀಶ್ ಪಾಂಡೆ 31 ರನ್(20 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ಜಾನಿ ಬೈರ್ಸ್ಟೋವ್ 30ರನ್ (21 ಎಸೆತ, 4 ಬೌಂಡರಿ, 1 ಸಿಕ್ಸರ್) ಭಾರಿಸಿದ್ದು, ಬಿಟ್ಟರೆ ಇತರ ದಾಂಡಿಗರು ಉತ್ತಮ ಪ್ರದರ್ಶನ ನೀಡಲು ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಕೇನ್ ವಿಲಿಯಮ್ಸನ್ 20 ರನ್ (21 ಎಸೆತ, 1 ಬೌಂಡರಿ), ಕೇದರ್ ಜಾದವ್ 19 ರನ್ (19 ಎಸೆತ, 1 ಸಿಕ್ಸ್) ಮಾತ್ರ ಬಾರಿಸಿದರು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡಕ್ಕೆ ಜೋಸ್ ಬಟ್ಲರ್ ಅಬ್ಬರದ ಬ್ಯಾಟಿಂಗ್ (124 ರನ್, 64 ಎಸೆತ, 11 ಬೌಂಡರಿ, 8 ಸಿಕ್ಸರ್) ಮೂಲಕ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ತಂಡದ ನಾಯಕ ಸಂಜು ಸ್ಯಾಮ್ಸ್ ನ್ 48 ರನ್ (33 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿದರು. ಈ ಜೋಡಿ 2ನೇ ವಿಕೆಟ್‍ಗೆ 150 ರನ್ (88 ಎಸೆತ) ಜೊತೆಯಾಟವಾಡಿತು. ಕೊನೆಯಲ್ಲಿ ರಿಯಾನ್ ಪಾರಾಗ್ 15 ರನ್ (8 ಎಸೆತ, 1 ಸಿಕ್ಸರ್), ಡೇವಿಡ್ ಮಿಲ್ಲರ್ 7 ರನ್ (3 ಎಸೆತ, 1 ಸಿಕ್ಸರ್) ಸಿಡಿಸಿ ತಂಡದ ಮೊತ್ತ ಏರಿಕೆಗೆ ಕಾರಣರಾದರು.
0 comments:
Post a Comment