ಬಂಟ್ವಾಳ, ಬಂಟ್ವಾಳ, ಮೇ 31, 2021 (ಕರಾವಳಿ ಟೈಮ್ಸ್) : ಪುದು ಗ್ರಾಮ ಪಂಚಾಯತ್ ಕೋವಿಡ್-19 ಕಾರ್ಯಪಡೆ ಸಭೆಯು ಸೋಮವಾರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ ಎ ಅವರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಜೊತೆಗೂಡಿ ಕೊರೋನಾ ನಿರ್ಮೂಲನಾ ಕಾರ್ಯವನ್ನು ಕೈಗೊಳ್ಳಬೇಕಾಗಿದ್ದು, ಪಂಚಾಯತ್ ಆಡಳಿತ ಕೋರೋನಾ ವಾರಿಯರ್ಸ್‍ಗಳ ಜೊತೆ ಯಾವತ್ತೂ ಇದೆ ಎಂದು ಭರವಸೆ ನೀಡಿದರು. ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಎಲ್ಲಾ ಅವಶ್ಯಕತೆಗಳಿಗೂ ಗ್ರಾಮ ಪಂಚಾಯತ್ ಸದಾ ಸ್ಪಂದಿಸಲಿದ್ದು, ಈ ನಿಟ್ಟಿನಲ್ಲಿ ಜನರ ಆರೋಗ್ಯ ರಕ್ಷಣೆಗಾಗಿ ಕಾರ್ಯನಿರ್ವಹಿಸುವಲ್ಲಿ ಯಾವುದೇ ಹಿಂದೇಟು ಬೇಡ ಎಂದವರು ಧೈರ್ಯ ತುಂಬಿದರು. ಅಲ್ಲದೆ ಕೋವಿಡ್-19 ರೋಗವು ಹರಡುವಿಕೆಯನ್ನು ತಡೆಗಟ್ಟುವ ಕ್ರಮವನ್ನು ಪಿಡಿಒ ಸಭೆಗೆ ವಿವರಿಸಿದರು.
ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಲೀಡಿಯಾ ಪಿಂಟೋ, ಸದಸ್ಯರುಗಳು, ಗ್ರಾಮ ಲೆಕ್ಕಾಧಿಕಾರಿ ನವ್ಯ ಎಸ್ ಎನ್ ರಾವ್, ಪಂಚಾಯತ್ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಇದೇ ವೇಳೆ ಅಂಗನವಾಡಿ ಕಾರ್ಯಕರ್ತೆಯರಿಗೆ ರೇಶನ್ ಕಿಟ್ ವಿತರಿಸಲಾಯಿತು. ಇತ್ತೀಚೆಗೆ ನಡೆದ ಶಾಸಕರ ಕಾರ್ಯಪಡೆ ಸಭೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ರೇಶನ್ ಕಿಟ್ ವಿತರಿಸಲಾಗಿತ್ತು.
0 comments:
Post a Comment