ಬಂಟ್ವಾಳ, ಮೇ 15, 2021 (ಕರಾವಳಿ ಟೈಮ್ಸ್) : ಯೂನಿಕ್ ಸ್ಪೋಟ್ರ್ಸ್ ಕ್ಲಬ್ (ರಿ) ಮಂಗಳೂರು ಇದರ ವತಿಯಿಂದ ವಹಾಬ್ ಗೂಡಿನಬಳಿ ನೇತೃತ್ವದಲ್ಲಿ ಈದ್ ಹಬ್ಬವನ್ನು ಸರಳವಾಗಿ ಮಾಸ್ಕ್ ವಿತರಣೆ ಮಾಡುವ ಮೂಲಕ ಅಬ್ದುಲ್ ಸಮದ್ ಕಾಟಿಪಳ್ಳ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಸುಮಾರು 13 ಪರಿಸರಕ್ಕೆ ಕ್ಲಬ್‍ನ ಕೆಲವು ಸದಸ್ಯರಿಂದ ಉಚಿತ ಮಾಸ್ಕ್ ವಿತರಿಸಲಾಯಿತು.
ಇಸ್ಮಾಯಿಲ್ ನಂದಾವರ, ಝಿಯಾನ್ ಗೂಡಿನಬಳಿ, ಝಹೀರ್ ಗೂಡಿನಬಳಿ. ರಿಯಾಝ್ ವಾಮಂಜೂರು, ಮಜೀದ್ ಮಲ್ಲೂರು, ಜಮಾಲ್ ಮಲಾರ್, ಝಕೀರ್ ಜೋಕಟ್ಟೆ, ಸಮೀರ್ ಮಲಾರ್, ಸ್ಟಾರ್ ನವಾಝ್ ಮೊದಲಾದವರು ಕಾರ್ಯಕ್ರಮಕ್ಕೆ ಮುತವರ್ಜಿ ವಹಿಸಿದ್ದರು.
0 comments:
Post a Comment