ಬಂಟ್ವಾಳ, ಮೇ 17, 2021 (ಕರಾವಳಿ ಟೈಮ್ಸ್) : ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಜೀರ್ ಹಾಗೂ ಮಾರಿಪಳ್ಳ ಪರಿಸರದ ಕೋವಿಡ್-19 ಕಾರ್ಯಪಡೆ ಜನಜಾಗೃತಿ ಸಭೆ ಸುಜೀರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆಯಿತು.
ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಸಭಾಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ ಎ, ಗ್ರಾಮ ಕರಣಿಕರಾದ ನವ್ಯ ಎಸ್ ಎನ್ ರಾವ್, ಪಂಚಾಯತ್ ಸದಸ್ಯರಾದ ಹುಸೈನ್ ಪಾಡಿ, ಇಕ್ಬಾಲ್ ಸುಜೀರ್, ಕಿಶೋರ್ ಸುಜೀರ್, ರೆಹನಾ ಮಾರಿಪಳ್ಳ, ಸುಜಾತ ಮಾರಿಪಳ್ಳ, ಮುಮ್ತಾಝ್ ಸುಜೀರ್, ಕೋವಿಡ್ ಕಾರ್ಯಪಡೆ ಸದಸ್ಯರಾದ ಅಬೂಬಕ್ಕರ್ ಪಿಬಿಎಂ ತುಂಬೆ, ಹಕೀಂ ಮಾರಿಪಳ್ಳ, ಕೆ ಎಂ ಅಶ್ರಫ್ ಮಲ್ಲಿ, ಇಮ್ರಾನ್ ಮಾರಿಪಳ್ಳ, ಸಿದ್ದೀಕ್ ಗುಡ್ಡೆ ಮನೆ, ಗಣೇಶ್ ಮಲ್ಲಿ, ಶಾಲಾ ಶಿಕ್ಷಕರು, ಆರೋಗ್ಯ ಕೇಂದ್ರ ಸಿಬ್ಬಂದಿ ಪ್ರಿಯ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು ಸಬೆಯಲ್ಲಿ ಭಾಗವಹಿಸಿದ್ದರು.
0 comments:
Post a Comment