ಮಂಗಳೂರು, ಮೇ 07, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 7 ರ ಶುಕ್ರವಾರದಿಂದ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ಜಿಲ್ಲಾಡಳಿತ ಗುರುವಾರ ನಿರ್ಧರಿಸುತ್ತಿದ್ದಂತೆ ಗುರುವಾರ ರಾತ್ರಿಯೇ ಸ್ವತಃ ಫೀಲ್ಡಿಗಿಳಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅನಗತ್ಯ ಸಂಚಾರ ನಡೆಸಿದ ವಾಹನ ಚಾಲಕರ ವಿರುದ್ದ ಕಾರ್ಯಾಚರಣೆ ಕೈಗೊಂಡರು.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ವಿವಿಧ ನಗರಗಳಲ್ಲಿರುವ ಚೆಕ್ ಪೋಸ್ಟ್ ಗಳಲ್ಲಿ ಕಮಿಷನರ್ ವಾಹನ ತಪಾಸಣೆಗೆ ಕೈಗೊಂಡರು. ಈ ಸಂದರ್ಭ ಅನೇಕ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿ ಸಂಚಾರ ನಡೆಸುತ್ತಿರುವುದು ಪತ್ತೆಯಾಗಿದ್ದು, ಅವರ ವಿರುದ್ಧ ಕಮಿಷನರ್ ಕ್ರಮ ಜರುಗಿಸಿದ್ದಾರೆ. ಸೂಕ್ತ ದಾಖಲೆ ಹೊಂದಿ ಅಗತ್ಯ ಕಾರ್ಯಗಳಿಗೆ ಸಂಚಾರ ಕೈಗೊಂಡ ಚಾಲಕರಿಗೆ ಅವಕಾಶ ನೀಡಿದ ಕಮಿಷನರ್ ಅನಗತ್ಯ ಸಂಚಾರ ಕೈಗೊಂಡ ಚಾಲಕರ ವಿರುದ್ದ ಕ್ರಮ ಕೈಗೊಂಡಿದ್ದಾರೆ.
0 comments:
Post a Comment