ಕೋಲ್ಕತ್ತಾ, ಮೇ 05, 2021 (ಕರಾವಳಿ ಟೈಮ್ಸ್) : ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಮೂರನೇ ಬಾರಿಗೆ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರಮಾಣ ವಚನ ಸ್ವೀಕಾರ ನಡೆಸಿದರು.
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸತತ 3ನೇ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಸರಕಾರ ರಚನೆ ಮಾಡಿದೆ. ರಾಜ್ಯಪಾಲ ಜಗದೀಪ್ ಧನ್‍ಖಡ್ ಪ್ರಮಾಣ ವಚನ ಬೋಧಿಸಿದರು. ಮಮತಾ ಬ್ಯಾನರ್ಜಿ ಅವರನ್ನ ಹೊರತುಪಡಿಸಿ ಇತರ ಯಾರು ಕೂಡಾ ಇಂದು ಪ್ರಮಾಣ ವಚನ ಸ್ವೀಕರಿಸಲಿಲ್ಲ.
ಸಮಾರಂಭದಲ್ಲಿ ಟಿಎಂಸಿಯ ಚುನಾವಣೆಯ ರಣತಂತ್ರಗಾರ ಪ್ರಶಾಂತ್ ಕಿಶೋರ್, ಸಂಬಂಧಿ ಅಭಿಷೇಕ್ ಬ್ಯಾನರ್ಜಿ, ಪ್ರದೀಪ್ ಭಟ್ಟಾಚಾರ್ಯ ಸೇರಿದಂತೆ ಕೆಲವೇ ಸಂಖ್ಯೆಯ ಟಿಎಂಸಿ ನಾಯಕರು ಮಾತ್ರ ಬಾಗವಹಿಸಿದ್ದರು. 292 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಟಿಎಂಸಿ 213ರಲ್ಲಿ ಗೆದ್ದಿದೆ. ಬಿಜೆಪಿ 77 ಸ್ಥಾನಗಳಲ್ಲಿ ಜಯಗಳಿಸಿದೆ.
0 comments:
Post a Comment