ಕೋಲಾರ ಮೇ 15, 2021 (ಕರಾವಳಿ ಟೈಮ್ಸ್) : ಒಂದೇ ಮೂಹರ್ತದಲ್ಲಿ ಅಕ್ಕ, ತಂಗಿಯರಿಬ್ಬರನ್ನು ವ್ಯಕ್ರಿಯೋರ್ವ ವರಿಸಿದ ಅಪರೂಪದ ಘಟನೆಗೆ ಕೋಲಾರ ಜಿಲ್ಲೆ ಸಾಕ್ಷಿಯಾಗಿದ್ದು, ಈ ಮದುವೆಯ ಆಮಂತ್ರಣ ಪತ್ರಿಕೆ ಹಾಗೂ ಫೋಟೋಗಳು ಇದೀಗ ಸಾಮಾಜಿಕ ತಾಣಗಳಲ್ಲಿ ಸಕತ್ ವೈರಲ್ ಆಗಿದೆ.
ಸೌಭಾಗ್ಯವತಿ ಸುಪ್ರಿಯಾ ಹಾಗೂ ಲಲಿತಾರನ್ನ ಚಿರಂಜೀವಿ ಯುವಕನೋರ್ವ ಒಂದೇ ಮುಹೂರ್ತದಲ್ಲಿ ಮದುವೆ ಆಗಿರುವ ಫೋಟೊ ಹಾಗೂ ಮದುವೆಯ ಕರೆಯೊಲೆ ಸಖತ್ ವೈರಲ್ ಆಗಿದೆ. ಎಲ್ಲರೂ ನಂಬಲೇ ಬೇಕಾದ ತಮ್ಮ ಕಲ್ಪನೆಗೆ ಮೀರಿದ ಸನ್ನಿವೇಶ ಇದಾಗಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಮೇ 7 ರಂದು ಈ ಅಪರೂಪದ ಮದುವೆ ನಡೆದಿದ್ದು, ಸುಪ್ರಿಯಾ ಹಾಗೂ ಲಲಿತ ಎಂಬ ಇಬ್ಬರು ಅಕ್ಕ ತಂಗಿಯರನ್ನು ಉಮಾಪತಿ ಒಂದೇ ಮುಹೂರ್ತದಲ್ಲಿ ಮದುವೆ ಮಾಡಿಕೊಂಡಿದ್ದಾರೆ.
ಅಕ್ಕ ಸುಪ್ರಿಯಾಗೆ ಮಾತು ಬರುವುದಿಲ್ಲ, ತಂಗಿ ಲಲಿತಾಗೆ ಕಿವಿ ಕೇಳಿಸಲ್ಲ. ಒಬ್ಬರಿಗೆ ಮದುವೆಯಾದ್ರೆ ಮತ್ತೊಬ್ಬರ ಪರಿಸ್ಥಿತಿ ಹೇಗೆ ಎಂದು ಯೋಚನೆ ಮಾಡಿದ ಪೋಷಕರು ಅಕ್ಕ ತಂಗಿಯನ್ನು ಒಬ್ಬನಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಗ್ರಾಮದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಸಹೋದರಿಯರನ್ನು ಉಮಾಪತಿ ಮದುವೆ ಮಾಡಿಕೊಂಡಿದ್ದಾರೆ.
ಕೇವಲ ಸಿನಿಮಾದಲ್ಲಿ ಮಾತ್ರ ಕಂಡು ಬರುತ್ತಿದ್ದ ಒಂದೇ ಮಂಟಪದಲ್ಲಿ ಇಬ್ಬರನ್ನು ವರಿಸುವ ಸನ್ನಿವೇಶ ಇದೀಗ ಕೋಲಾರದಲ್ಲಿ ನೈಜವಾಗಿ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
0 comments:
Post a Comment