ಬಂಟ್ವಾಳ, ಮೇ 12, 2021 (ಕರಾವಳಿ ಟೈಮ್ಸ್) : ಮಾರಕ ಕೊರೋನಾ ವೈರಸ್ 2ನೇ ಅಲೆ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇರಾ ಗ್ರಾ ಪಂ ಟಾಸ್ಕ್ ಫೋರ್ಸ್ ಸಮಿತಿಯ ಕೊರೊನ ಜಾಗೃತಿ ಸಭೆ ಮಂಗಳವಾರ ಇರಾ ಮಲೆಯಾಳಿ ಬಿಲ್ಲವ ಸಭಾ ಭವನದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಆಗ್ನೇಸ್ ಡಿ’ ಸೋಜ ಪಿ., ಉಪಾದ್ಯಕ್ಷ ಮೊಯಿದು ಕುಂಞÂ, ತಾ ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ನೋಡೆಲ್ ಅಧಿಕಾರಿ ಅಕ್ಷತಾ ಕೆ, ಬಂಟ್ವಾಳ ಗ್ರಾಮಾಂತರ ಪಿಎಸ್ಸೈ ಪ್ರಸನ್ನ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದು, ಮಾರಕ ಕೊರೊನ ಸಂಕೋಲೆಯನ್ನು ತುಂಡರಿಸುವ ಬಗ್ಗೆ ನಾವೆಲ್ಲರೂ ಕಾರ್ಯೋನ್ಮುಖರಾಗಬೇಕು. ಅದೇ ರೀತಿ ಗ್ರಾಮದ ಪ್ರತಿಯೊಬ್ಬ ನಾಗರಿಕನು ಕೂಡಾ ನಮ್ಮೊಂದಿಗೆ ಸಹಕರಿಸಬೇಕು. ದೂರದ ಊರಿನಿಂದ ಬಂದವರು ಅನಗತ್ಯ ಮನೆಯ ಹೊರಗಡೆ ತಿರುಗಾಡದೆ 15 ದಿನ ಸ್ವಯಂ ಗೃಹ ಬಂಧನದಲ್ಲಿರಬೇಕು, ಮನೆ ಮನೆಗೆ ಬೇಟಿ ಕೊಡುವ ಆಶಾ ಕಾರ್ಯಕರ್ತರಿಗೆ ಸೂಕ್ತ ಮಾಹಿತಿ ನೀಡಬೇಕು, ಬೆಳಗ್ಗೆ 10 ಗಂಟೆಯ ನಂತರ ಯಾವುದೆ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ತೆರೆಯಬಾರದು, ಯಾರಾದರೂ ಅನಾರೋಗ್ಯ ಸಮಸ್ಯೆ ಕಾಡಿದರೆ ಕೂಡಲೆ ಅಸ್ಪತ್ರೆಗೆ ತೆರಳಿ ಆರೋಗ್ಯ ಪರೀಕ್ಷಿಸಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಸುಧಾಕರ ಕೆ.ಟಿ., ಪಂಚಾಯತ್ ಸದಸ್ಯರು, ಆರೋಗ್ಯ ಸಹಾಯಕಿ ಶ್ರೀಮತಿ ರಾಧ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕೊರೊನ ಜಾಗೃತಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ನಳಿನಿ ಎ ಕೆ ಸ್ವಾಗತಿಸಿ, ಪಿಡಿಒ ಶ್ರೀಮತಿ ಸುಶೀಲ ವಂದಿಸಿದರು.
0 comments:
Post a Comment