ಅಹಮದಾಬಾದ್, ಮೇ 01, 2021 (ಕರಾವಳಿ ಟೈಮ್ಸ್) : ಐಪಿಎಲ್ 14ನೇ ಆವೃತ್ತಿಯ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನು 35 ರನ್‍ಗಳಿಂದ ಸೋಲಿಸಿದೆ.
ಗೆಲ್ಲಲು 180 ರನ್‍ಗಳ ಗುರಿ ಪಡೆದ ಆರ್‍ಸಿಬಿ ತಂಡ ತೀವ್ರ ಬ್ಯಾಟಿಂಗ್ ಕುಸಿತ ಅನುಭವಿಸಿ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ಕಳೆದುಕೊಂಡು 145 ರನ್ ಗಳಿಸಲಷ್ಟೆ ಶಕ್ತವಾಯಿತು. ಈ ಗೆಲುವಿನೊಂದಿಗೆ ಪಂಜಾಬ್ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದರೆ, ಬೆಂಗಳೂರು 3ನೇ ಸ್ಥಾನದಲ್ಲಿ ಉಳಿದಿದೆ.
ಪಂಜಾಬ್ ಪರ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಹಪ್ರ್ರೀತ್ ಬ್ರಾರ್ 4 ಓವರ್‍ಗಳಲ್ಲಿ ಒಂದು ಮೇಡನ್ ಸಹಿತ 3 ವಿಕೆಟ್ ಕಬಳಿಸುವ ಮೂಲಕ ಬೆಂಗಳೂರು ತಂಡ ಬೆನ್ನೆಲುಬು ಮುರಿದರು. ಆರ್ಸಿಬಿ ಪರವಾಗಿ ವಿರಾಟ್ ಕೊಹ್ಲಿ 35 ರನ್ (34 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ರಜಾತ್ ಪಟೀದಾರ್ 31 ರನ್ (30 ಎಸೆತ, 2 ಬೌಂಡರಿ, 1 ಸಿಕ್ಸರ್), ಹರ್ಷಲ್ ಪಟೇಲ್ 31 ರನ್ (13 ಎಸೆತ, 3 ಬೌಂಡರಿ, 2 ಸಿಕ್ಸ್), ಕೈಲ್ ಜೇಮಿಸನ್ 16 ರನ್ (11 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿದರು.
ರವಿ ಬಿಷ್ನೊಯ್ 2 ವಿಕೆಟ್, ರಿಲೇ ಮೆರಡಿತ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡ್‍ನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ರಾಹುಲ್ (ಅಜೇಯ 91 ರನ್, 57 ಎಸೆತ, 7 ಬೌಂಡರಿ, 5 ಸಿಕ್ಸರ್) ಹಾಗೂ ಕ್ರಿಸ್ ಗೇಲ್ (46 ರನ್, 24 ಎಸೆತ, 6 ಬೌಂಡರಿ, 2 ಸಿಕ್ಸ್) 2ನೇ ವಿಕೆಟ್‍ಗೆ 80 ರನ್ (45 ಎಸೆತ) ಜೊತೆಯಾಟವಾಡಿತು. ಹಪ್ರ್ರೀತ್ ಬ್ರಾರ್ 25 ರನ್ (17 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 170ರ ಗಡಿದಾಟಿಸಿದರು.
17ನೇ ಓವರ್ ಅಂತ್ಯದಲ್ಲಿ 132 ರನ್ ಗಳಿಸಿದ್ದ ಪಂಜಾಬ್ ತಂಡ ಮುಂದಿನ ಮೂರು ಓವರ್‍ಗಳಲ್ಲಿ 47 ರನ್ ಸಿಡಿಸಿತು. 20ನೇ ಓವರ್ ಎಸೆದ ಹರ್ಷಲ್ ಪಟೇಲ್ ಅವರ ಓವರಿನಲ್ಲಿ 22 ರನ್ ಹರಿದು ಬಂತು. ಅಂತಿಮವಾಗಿ ಪಂಜಾಬ್ ತಂಡ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 179ರನ್ ಗಳಿಸಿತು.
0 comments:
Post a Comment