ಮಂಗಳೂರು, ಮೇ 14, 2021 (ಕರಾವಳಿ ಟೈಮ್ಸ್) : ತಾಲೂಕಿನ ಮುಕ್ಕ ಶ್ರೀನಿವಾಸ್ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಮೆಡಿಸಿನ್ ವಿಭಾಗವನ್ನು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಕೋವಿಡ್ ಒಂದನೇ ಅಲೆ ಹಾಗೂ ಎರಡನೇ ಅಲೆಯಂತಹ ಕಠಿಣ ಪರಿಸ್ಥಿತಿಯಲ್ಲಿ ಶ್ರೀನಿವಾಸ್ ಆಸ್ಪತ್ರೆಯು ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಯನ್ನು ನೀಡುತ್ತಾ ಬಂದಿದೆ ಎಂದರು.
ಎಮರ್ಜೆನ್ಸಿ ಮೆಡಿಸಿನ್ ವಿಭಾಗದ ಒಳಗೆ ಹಳದಿ, ಹಸಿರು, ಕೆಂಪು ವಿಭಾಗಗಳಿವೆ. ರೋಗಿಯ ರೋಗ ಸ್ಥಿತಿಗೆ ಅನುಗುಣವಾಗಿ ಬೇರೆ ಬೇರೆ ವಿಭಾಗದಲ್ಲಿ ಸೇರಿಸಿಕೊಳ್ಳಲಾಗುವುದು. ಒಟ್ಟು 81 ತೀವ್ರ ನಿಗಾ ಘಟಕ (ಐಸಿಯು) ಬೆಡ್‍ಗಳಿದ್ದು, ಇದರಲ್ಲಿ 31 ಬೆಡ್‍ಗಳನ್ನು ಹೊಸತಾಗಿ ಕೋವಿಡ್‍ಗೆ ಸೇರ್ಪಡಿಸಲಾಗಿವೆ.
ಶ್ರೀನಿವಾಸ್ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಹಾಗೂ ಎ ಶಾಮರಾವ್ ಫೌಂಡೇಶನ್ ಉಪಾಧ್ಯP್ಷÀ ಡಾ. ಎ ಶ್ರೀನಿವಾಸ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಎ ಶಾಮರಾವ್ ಫೌಂಡೇಶನ್ ಅಧ್ಯP್ಷÀ ಡಾ. ಸಿಎಎ ರಾಘವೇಂದ್ರ ರಾವ್, ಮಂಗಳೂರು ಉತ್ತರ ಶಾಸಕ ಡಾ ಭರತ್ ಶೆಟ್ಟಿ, ಸ್ಥಳೀಯ ಕಾರ್ಪರೇಟರ್‍ಗಳಾದ ನಯನಾ, ಶ್ವೇತ, ಶೋಭಾ, ಹಾಗೂ ಆಸ್ಪತ್ರೆಯ ವೈದ್ಯರುಗಳು ಉಪಸ್ಥಿತರಿದ್ದರು.
ಶ್ರೀನಿವಾಸ್ ಇನ್ಸ್ಟ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಂಡ್ ರಿಸರ್ಚ್ ಸೆಂಟರಿನ ಡೀನ್ ಡಾ. ಉದಯ ಕುಮಾರ್ ರಾವ್ ಸ್ವಾಗತಿಸಿ, ಮೆಡಿಸಿನ್ ವಿಭಾಗದ ಮುಖ್ಯಸ್ಥೆ ಡಾ. ಅನಿತಾ ಸಿಕ್ವೇರಾ ವಂದಿಸಿದರು.
0 comments:
Post a Comment