ಬಂಟ್ವಾಳ, ಮೇ 12, 2021 (ಕರಾವಳಿ ಟೈಮ್ಸ್) : ಕರಾವಳಿ ಜಿಲ್ಲೆಗಳಲ್ಲಿ ಮುಸ್ಲಿಂ ಬಾಂಧವರು ಗುರುವಾರ (ಮೇ 13) ಈದುಲ್ ಫಿತ್ರ್ ಹಬ್ಬವನ್ನು ಆಚರಿಸುತ್ತಿದ್ದಾರೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಸರ್ವ ಬಾಂಧವರಿಗೂ ಈದುಲ್ ಫಿತ್ರ್ ಹಬ್ಬದ ಶುಭಾಶಯಗಳನ್ನು ಕೋರಿರುವ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಹಾಗೂ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಅವರು ಈ ಬಾರಿಯ ಪವಿತ್ರ ರಮಳಾನ್ ತಿಂಗಳ ಉಪವಾಸ ವೃತವನ್ನು ಪೂರ್ತಿ 30 ದಿನಗಳ ಕಾಲ ಕೋರೋನಾ ವೈರಸ್ ಭೀತಿ ಹಾಗೂ ಲಾಕ್ ಡೌನ್ ಜಂಜಾಟದ ನಡುವೆ ಆಚರಿಸಿದ್ದು, ಇದೀಗ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲು ಸಂಭ್ರಮದಿಂದ ಸಜ್ಜಾಗುತ್ತಿದ್ದಾರೆ. ಆದರೆ ಈ ಬಾರಿಯ ಈದ್ ಸಂಭ್ರಮ ಬಡವರ, ಹೊಟ್ಟೆ ಹಸಿದಿರುವ ಮಂದಿಗಳ ಹಸಿವಿಗೆ ಸ್ಪಂದಿಸುವಂತಾಗಲಿ, ಪುರವಾಸಿಗಳು ತಮ್ಮ ತಮ್ಮ ಮನೆಗಳಲ್ಲೇ ಈದ್ ಸಂಭ್ರಮವನ್ನು ಕುಟುಂಬ ಸದಸ್ಯರೊಂದಿಗೆ ಮಾತ್ರ ಆಚರಿಸಿ, ಈದ್ ವಿಶೇಷ ಪ್ರಾರ್ಥನೆಗಳನ್ನು ಕೂಡಾ ಮನೆಗಳಲ್ಲೇ ನಡೆಸಿ ಸರಕಾರದ ಹಾಗೂ ಖಾಝಿಗಳ ಕೋವಿಡ್ ಮಾರ್ಗಸೂಚಿಗಳನ್ನು ಯಥಾವತ್ ಪಾಲಿಸುವ ಮೂಲಕ ಮಾರಕ ವೈರಸ್ ನಿಯಂತ್ರಣಕ್ಕೆ ಸ್ವಯಂ ನಿಯಂತ್ರಣ ಹೇರಿಕೊಳ್ಳುವಂತೆ ಅವರು ಜಂಟಿ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.
ಪ್ರತಿಯೊಬ್ಬ ಪುರವಾಸಿಗಳೂ ಕೂಡಾ ಸ್ವಯಂ ಜವಾಬ್ದಾರಿ ವಹಿಸಿಕೊಂಡು ಮಾರಕ ವೈರಸ್ ನಿಯಂತ್ರಣಕ್ಕೆ ತಮ್ಮ ತಮ್ಮ ಅತ್ಯಮೂಲ್ಯ ಕೊಡಗೆ ನೀಡುವಂತೆ ಅವರುಗಳು ಸಲಹೆ ನೀಡಿದ್ದಾರೆ.
0 comments:
Post a Comment