ಐಪಿಎಲ್ ಆಟಗಾರರ ಬಯೋಬಬಲ್ ಬ್ರೇಕ್ ಮಾಡಿದ ಕೊರೋನಾ : ಇಂದಿನ ಆರ್.ಸಿ.ಬಿ-ಕೆಕೆಆರ್ ಪಂದ್ಯ ಮುಂದೂಡಿಕೆ? - Karavali Times ಐಪಿಎಲ್ ಆಟಗಾರರ ಬಯೋಬಬಲ್ ಬ್ರೇಕ್ ಮಾಡಿದ ಕೊರೋನಾ : ಇಂದಿನ ಆರ್.ಸಿ.ಬಿ-ಕೆಕೆಆರ್ ಪಂದ್ಯ ಮುಂದೂಡಿಕೆ? - Karavali Times

728x90

3 May 2021

ಐಪಿಎಲ್ ಆಟಗಾರರ ಬಯೋಬಬಲ್ ಬ್ರೇಕ್ ಮಾಡಿದ ಕೊರೋನಾ : ಇಂದಿನ ಆರ್.ಸಿ.ಬಿ-ಕೆಕೆಆರ್ ಪಂದ್ಯ ಮುಂದೂಡಿಕೆ?


ನವದೆಹಲಿ, ಮೇ 03, 2021 (ಕರಾವಳಿ ಟೈಮ್ಸ್) : ಕೆಲವೊಂದು ಸೂಕ್ಷ್ಮ ಎಚ್ಚರಿಕೆ ಹಾಗೂ ಕಡ್ಡಾಯ ಕೋವಿಡ್ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಯ ಹೊರತಾಗಿಯೂ ಮಾರಕ ಕೊರೋನಾ ವೈರಸ್ ಐಪಿಎಲ್ ಆಟಗಾರರ ಬಯೋಬಬಲ್ ಬ್ರೇಕ್ ಮಾಡಿದೆ. ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರಿಗೆ ಕೊರೋನಾ ವೈರಸ್ ಎಡತಾಕಿದೆ. 

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವಿನ ಸೋಮವಾರದ ಪಂದ್ಯಕ್ಕೆ ಇನ್ನೇನು ಕ್ಷಣಗಣನೆಯಲ್ಲಿರುತ್ತಲೇ ಕೆಕೆಆರ್ ತಂಡದ ಇಬ್ಬರು ಆಟಗಾರರಾದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ ಅವರಿಗೆ ಕೊರೋನಾ ಸೋಂಕು ವಕ್ಕರಿಸಿದೆ. ಪರಿಣಾಮ ಇಂದಿನ ಪಂದ್ಯದ ಮೇಲೆ ಕರಿನೆರಳು ಬೀರಿದೆ. 

ಈ ಇಬ್ಬರು ಆಟಗಾರರ ಪೈಕಿ ಬಯೋ ಬಬಲ್‍ನಲ್ಲಿ ಇರುವ ಓರ್ವ ಕ್ರಿಕೆಟ್ ಆಟಗಾರನಿಗೆ ಕೊವಿಡ್ ಸೋಂಕು ದೃಢಪಟ್ಟಿದೆ ಎಂದು ಹೇಳಲಾಗಿದ್ದು, ಇದು ಇತರೆ ಆಟಗಾರರಿಗೂ ಸೋಂಕಿನ ಭೀತಿ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಅಂದರೆ ಮೇ 3 ರಂದು ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗ್ತೂ ಕೋಲ್ಕತಾ ನೈಟ್ ರೈಡರ್ಸ್ ನಡುವೆ ಅಹಮದಾಬಾದ್‍ನಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಮುಂದೂಡಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿರುವ ಬಿಸಿಸಿಐ ಈ ಸಂಬಂಧ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. 

ಐಪಿಎಲ್ ಕೂಟದಲ್ಲಿ ಪಾಲ್ಗೊಂಡಿರುವ ಎಲ್ಲ ಆಟಗಾರರೂ ಸುರಕ್ಷಿತ ಬಯೋಬಬಲ್‍ನಲ್ಲಿದ್ದು, ಎಲ್ಲರನ್ನೂ ಬಾಹ್ಯ ಪ್ರಪಂಚದಿಂದ ದೂರವಿಡಲಾಗಿತ್ತು. ಆದರೆ ಪಂದ್ಯಗಳ ನಡುವೆ ಗಾಯಗಳಿಗೆ ಚಿಕಿತ್ಸೆ ಪಡೆಯಲು, ಸ್ಕ್ಯಾನಿಂಗ್ ಮಾಡಿಸಲು ಹೊರಗೆ ಹೋಗಿದ್ದಾಗ ಇವರಿಬ್ಬರಿಗೂ ಸೋಂಕು ತಗುಲಿರಬಹುದು ಎಂದು ಹೇಳಲಾಗುತ್ತಿದೆ. 

ಇಬ್ಬರು ಆಟಗಾರರು ಕೋವಿಡ್ ಸೋಂಕಿಗೆ ತುತ್ತಾದ ಬೆನ್ನಲ್ಲೇ ಕೆಕೆಆರ್ ಫ್ರಾಂಚೈಸಿ ತಂಡದ ಎಲ್ಲ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಗಳನ್ನು ಕೋವಿಡ್ ಪರೀಕ್ಷೆಗೊಳಪಡಿಸಲು ಮುಂದಾಗಿದೆ. ಪ್ರಸ್ತುತ ಸೋಂಕಿಗೆ ತುತ್ತಾಗಿರುವ ಇಬ್ಬರು ಆಟಗಾರರನ್ನು ಪ್ರತ್ಯೇಕಿಸಿಡಲಾಗಿದ್ದು, ಕೊಠಡಿಯಲ್ಲಿಯೇ ಚಿಕಿತ್ಸೆ  ಟಿiೀಡಲಾಗುತ್ತಿದೆ. ಇದಕ್ಕಾಗಿ ತಂಡದ ವೈದ್ಯಕೀಯ ತಂಡ ಕಾರ್ಯ ಪ್ರವೃತ್ತವಾಗಿದ್ದು, ಸೋಂಕಿತ ಆಟಗಾರರಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ಆಟಗಾರರನ್ನು ಪರೀಕ್ಷೆಗೊಳಪಡಿಸಿದೆ ಎಂದು ತಿಳಿದು ಬಂದಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಐಪಿಎಲ್ ಆಟಗಾರರ ಬಯೋಬಬಲ್ ಬ್ರೇಕ್ ಮಾಡಿದ ಕೊರೋನಾ : ಇಂದಿನ ಆರ್.ಸಿ.ಬಿ-ಕೆಕೆಆರ್ ಪಂದ್ಯ ಮುಂದೂಡಿಕೆ? Rating: 5 Reviewed By: karavali Times