ನಿರ್ಲಕ್ಷ್ಯ ವಹಿಸಿದರೆ ಕೊರೋನಾನದಿಂದ ಪಾರಾಗಲು ಅಸಾಧ್ಯ ! - Karavali Times ನಿರ್ಲಕ್ಷ್ಯ ವಹಿಸಿದರೆ ಕೊರೋನಾನದಿಂದ ಪಾರಾಗಲು ಅಸಾಧ್ಯ ! - Karavali Times

728x90

3 May 2021

ನಿರ್ಲಕ್ಷ್ಯ ವಹಿಸಿದರೆ ಕೊರೋನಾನದಿಂದ ಪಾರಾಗಲು ಅಸಾಧ್ಯ !

 - ಡಿ.ಎಸ್.ಐ.ಬಿ ಪಾಣೆಮಂಗಳೂರು


ಕಣ್ಣಿಗೆ ಕಾಣದ, ಯಾರು ಕೂಡ ನೋಡದ ವೈರಸ್ ಒಂದು ಸುಮಾರು ತಿಂಗಳುಗಳಿಂದ ನಮ್ಮ ಸುತ್ತಮುತ್ತಲಿನಲ್ಲಿ ತಿರುಗಾಟ ಮಾಡುತ್ತಿದೆ. ಒಂದು ವರ್ಷ ಪೂರೈಸಿದ ಈ ಒಂದು ವೈರಸ್ ದೇಶ ವಿದೇಶಗಳನ್ನು ಸುತ್ತಾಡಿ ಶ್ರೀಮಂತ ಬಡವನೆಂದು ನೋಡದೆ ಅವರ ಜೀವನಕ್ಕೆ ವಿದಾಯ ಹೇಳುತ್ತಿದೆ. ಸುಲಭವಾಗಿ ಓಡಿಸಬಹುದಾದ ಈ ಒಂದು ವೈರಸ್ ಕೆಲವರ ಅತಿಯಾದ ಬುದ್ದಿವಂತಿಕೆಯಿಂದ ನಮ್ಮ ಬೆನ್ನು ಬಿಡದೆ ನಮ್ಮೊಂದಿಗೆ ಸುತ್ತಾಡುತ್ತಿವೆ. ನಿಷೇಧಿಸಬೇಕಾದ ಸಮಯದಲ್ಲಿ ನಿರ್ಲಕ್ಷ್ಯವಹಿಸಿ ಕೇವಲ ರಾತ್ರಿ ಹೊತ್ತು ಜನರಿಗೆ ನಿರ್ಬಂಧ ಹೇರಿ ಕೊರೊನ ಜಾಗೃತಿ ವಹಿಸಿದರೆ ಏನು ಲಾಭ? ಎಲ್ಲರೂ ಮಲಗಿದ ನಂತರ ಕೊರೊನ ಓಡಾಡಲು ಅದೇನು ಭೂತವೇ? ಹಗಲು ಹೊತ್ತಿನಲ್ಲಿ ಸಾರ್ವಜನಿಕವಾಗಿ ಗುಂಪು ಸೇರಲು ಬಿಟ್ಟು ನಂತರದ ಸಮಯದಲ್ಲಿ ಲಾಕ್‍ಡೌನ್ ಮಾಡಿದರೆ ಅಷ್ಟು ಸುಲಭವಾಗಿ ಕೊರೊನ ಓಡಿ ಹೋಗಲು ಸಾಧ್ಯವೇ ಇಲ್ಲ. ಕಳೆದ ವರ್ಷದ ನಿರ್ಲಕ್ಷ್ಯದಿಂದಾಗಿ ನಾವು ಇಂದು ಮತ್ತೊಮ್ಮೆ ಲಾಕ್‍ಡೌನ್ ಮಾಡಬೇಕಾಗಿ ಬಂದಿವೆ. ಸಾರ್ವಜನಿಕರಿಗೆ ಒಂದು ಕಾನೂನು ರಾಜಕಾರಣಿಗಳಿಗೊಂದು ಕಾನೂನು ಮಾಡಿದ ಪರಿಣಾಮ ನಾವು ಇಂದು ಸಂಕಷ್ಟಕ್ಕೆ ಸಿಲುಕಬೇಕಾಗಿದೆ.

ಕೊರೊನ ಕೇವಲ ರಾತ್ರಿ ಮಾತ್ರವಲ್ಲದೆ ದಿನದ 24 ಗಂಟೆಗಳ ಕಾಲವು ಅಸುರಕ್ಷಿತ ಜನರ ಮೇಲೆ ದಾಳಿ ಮಾಡುತ್ತಿವೆ. ಕೊರೊನಾಗೆ ಜಾತಿ, ಧರ್ಮ, ಶ್ರೀಮಂತ ಬಡವನೆಂದು ಭೇದ ಭಾವವಿಲ್ಲದಿದ್ದರೂ ಕೂಡ ಮಾನವ ಇನ್ನೂ  ಭೇದ ಭಾವ ಮಾಡುತ್ತಿರುವುದರಿಂದಲೇ ಈ ವೈರಸ್ ನಮ್ಮನ್ನು ಬಿಟ್ಟು ಹೋಗುತ್ತಿಲ್ಲ ಅಷ್ಟೇ.

ಬುದ್ದಿವಂತ ಮಾನವರು ಕಟ್ಟುನಿಟ್ಟಾಗಿ ಪಾಲಿಸಬೇಕಾದ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಸಾರ್ವಜನಿಕರು ಪಾಲಿಸುತ್ತಿದ್ದರು ಸರಕಾರ ಅವರ ವಿರುದ್ಧ ಕೈ ತೋರಿಸುತ್ತಿರುತ್ತವೆ. ಸಾರ್ವಜನಿಕ ಗುಂಪಾಗಿರುವುದರಿಂದ ಜಾಗೃತಿ ವಹಿಸಿದರೂ ಕೆಲವೊಂದು ರಾಜಕಾರಣಿಗಳು ಯಾವುದೇ ಜಾಗೃತಿ ಇಲ್ಲದೆ ನಿಯಮ ಉಲ್ಲಂಘಿಸಿದರು. ಈ ಬಗ್ಗೆ  ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು ಇನ್ನಷ್ಟು ಕೊರೊನ ರೋಗಿಗಳ ಸಂಖ್ಯೆ ಹೆಚ್ಚಾಗಲು ಕಾರಣ.

ಕೊರೊನ ಎಂಬುದು ರೋಗ ಎನ್ನುವುದಕ್ಕಿಂತ ಅದೊಂದು ಜೀವನಕ್ಕಿರುವ ಪಾಠ ಎಂದು ತಿಳಿಯಬೇಕಾಗಿದೆ. ಕಣ್ಣೆದುರು ಇಷ್ಟೆಲ್ಲ ದೃಶ್ಯಗಳು ಕಂಡರೂ ಬುದ್ದಿವಂತ ಮಾನವ ಇನ್ನೂ ಬದಲಾವಣೆ ಆಗದಿರುವುದು ವಿಪರ್ಯಾಸ. ಜಾತಿ ಧರ್ಮವೆಂದು ಪರಸ್ಪರ ಸಂಬಂಧವನ್ನು ದೂರ ಮಾಡಿ ಇಂದು ಕಷ್ಟದ ಸಂದರ್ಭದಲ್ಲಿ ಒಂದಾಗುವಾಗ ಪ್ರತಿಯೊಬ್ಬರಿಗೂ ಮನವರಿಕೆಯಾಗುತ್ತಿವೆ. ಇಂದು ಪ್ರಜೆಯೊಬ್ಬ ಬೆಂಕಿಯಲ್ಲಿ ಸುಟ್ಟು ಕರಗುತ್ತಿರುವಾಗ ಕೇಳುವವರ್ಯಾರು? ಇದಕ್ಕೆಲ್ಲ ಯಾರು ಹೊಣೆ? ನಾವು ಕೊಟ್ಟ ತೆರಿಗೆಯ ಹಣ ನಮ್ಮ ಚಿಕಿತ್ಸೆಗೆ ಉಪಕಾರವಾಗುತ್ತಿಲ್ಲವೆಂದಾದರೆ ಅಷ್ಟೊಂದು ಹಣ ಎಲ್ಲಿ ಹೋಯಿತು? ಸಾವಿರಾರು ಪ್ರಶ್ನೆಗಳು ಉದ್ಭವವಾದರೂ ಉತ್ತರ ಸಿಗುತ್ತಿಲ್ಲ. ಸ್ವಾತಂತ್ರ್ಯ ಹೋರಾಟಗಾರರು ಕೊಟ್ಟ ಆ ಸ್ವಾತಂತ್ರ್ಯ ನಮಗೆ ಸಿಗುತ್ತಿಲ್ಲ ಯಾಕೆ? ಕೊರೊನವನ್ನು ಮಾಸ್ಕ್ ಧರಿಸಿ ಓಡಿಸುವುದಕ್ಕಿಂತ ಪರಸ್ಪರ ಪ್ರೀತಿ ವಾತ್ಸಲ್ಯದಿಂದ ಓಡಿಸಬಹುದು. ಸರಕಾರದ ಜೊತೆ ಮಾತನಾಡುವಂತೆ ಇಲ್ಲ. ಅವರು ಅವರ ಇಷ್ಟದಂತೆ ಕಾನೂನು ಮಾಡುತ್ತಿದ್ದಾರೆ. ಜನರನ್ನು ಕಾಪಾಡಲು ಸಾಧ್ಯವಾಗದಿದ್ದಾಗ ಸಾಮೂಹಿಕವಾಗಿ ಬೆಂಕಿಯಲ್ಲಿ ಸುಟ್ಟು ಕರಗುವುದನ್ನು ನಾವು ಕಣ್ಣಾರೆ ಕಾಣಬಹುದಾಗಿದೆ. ರಾಜಕೀಯ ಪಕ್ಷಗಳು, ಅಧಿಕಾರಿಗಳೆಲ್ಲ ರಾಜ-ರಾಣಿಯಂತೆ ಜೀವಿಸಲು ಅಧಿಕಾರ ಎಂಬುದು ಆಡಂಬರದ ಜೀವನವಲ್ಲ. ಪ್ರಜೆಗಳ ಸೇವೆ ಮಾಡಲು ಇರುವ ಸೇವಕರು ಅಷ್ಟೇ. ಆದರೆ ಇಂದು ಪ್ರಜೆಗಳು ಸೇವಕರಾಗಿ, ಅಧಿಕಾರಿಗಳೆಲ್ಲ ರಾಜ ರಾಣಿಯಾಗಿ ಜೀವಿಸುತ್ತಿರುವುದರಿಂದ ಬಡಪಾಯಿ ವ್ಯಕ್ತಿಗಳು ನರಕ ಅನುಭವಿಸುತ್ತಿದ್ದಾರೆ. ಕೊರೊನವನ್ನು ಪ್ರತಿಯೊಬ್ಬರ ಸ್ವತಃ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅದನ್ನು ಓಡಿಸಬಹುದು ವಿನಃ ಯಾವುದೇ ಲಾಕ್‍ಡೌನ್ ಮಾಡಿದರೂ ಯಾವ ಪ್ರಯೋಜನವಿಲ್ಲ. ಬೆಳಿಗ್ಗೆ ಸಾರ್ವಜನಿಕವಾಗಿ ಅಗತ್ಯ ವಸ್ತುಗಳ ಖರೀದಿ ಜೊತೆ ಕೊರೊನವನ್ನು ಕೂಡ ಖರೀದಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಇಂತಹ ಲಾಕ್‍ಡೌನ್‍ಗಳಿಂದ ಕೊರೊನ ಯಾವ ರೀತಿಯಲ್ಲಿ ಓಡಿ ಹೋಗಬಹುದೆಂದು ಕಾದುನೋಡಬೇಕಾಗಿದೆ.

ನಮ್ಮನ್ನು ನಾವೇ ರಕ್ಷಿಸಿದರೆ ಮಾತ್ರ ನಾವು ಜೀವಂತವಾಗಿ ಇರಬಹುದು. ಇನ್ನೊಬ್ಬರನ್ನು ನಂಬಿ ಅಥವಾ ಸರಕಾರದ ಸವಲತ್ತುಗಳನ್ನು ನಂಬಿ ಇಷ್ಟ ಬಂದಂತೆ ವರ್ತಿಸಿದರೆ ಖಂಡಿತವಾಗಿಯೂ ನಾವು ಈ ಕೊರೊನದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಬೆಳಿಗ್ಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅನುಮತಿ ಕೊಟ್ಟಿದ್ದಾರೆಂದು ಕುಟುಂಬ ಸಮೇತವಾಗಿ ಮಾರುಕಟ್ಟೆಯಲ್ಲಿ ತಿರುಗಾಟ ಮಾಡಲು ಅವಕಾಶ ಕೊಟ್ಟು ಉಳಿದ ಗಂಟೆಗಳಲ್ಲಿ ಸುರಕ್ಷಿತವಾಗಿ ಮನೆಯಲ್ಲಿರಿ ಎಂದರೆ ಕೊರೊನದಿಂದ ಹೇಗೆ ಪಾರಾಗಲು ಸಾಧ್ಯ? ಎಂದು ತಿಳಿಯಲು ಅಸಾಧ್ಯವಾಗಿದೆ. ಎಲ್ಲಿ ತನಕ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲವೊ ಅಲ್ಲಿ ತನಕ ಈ ಕೊರೊನಾ ಓಡಿ ಹೋಗಲು ಖಂಡಿತವಾಗಿಯೂ ಸಾಧ್ಯವಿಲ್ಲ.

  • Blogger Comments
  • Facebook Comments

0 comments:

Post a Comment

Item Reviewed: ನಿರ್ಲಕ್ಷ್ಯ ವಹಿಸಿದರೆ ಕೊರೋನಾನದಿಂದ ಪಾರಾಗಲು ಅಸಾಧ್ಯ ! Rating: 5 Reviewed By: karavali Times
Scroll to Top