ಬಂಟ್ವಾಳ, ಮೇ 14, 2021 (ಕರಾವಳಿ ಟೈಮ್ಸ್) : ತಮ್ಮ ವಚನಗಳಿಂದ ಸಮಾಜ ಸುಧಾರಣೆಯ ಕೆಲಸ ಮಾಡಿದವರು ಬಸವಣ್ಣನವರು. ಸಮಾನತೆಯ ತತ್ವ ಸಾರಿದ ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತವಾಗುತ್ತದೆ
ಆಡು ಭಾಷೆಯಲ್ಲೆ ವಚನಗಳನ್ನು ರಚಿಸಿ ಎಲ್ಲಾ ಜನರ ಮನ ಮುಟ್ಟುವಂತೆ ತಿಳಿ ಹೇಳಿದವರಾಗಿದ್ದಾರೆ ಬಸವಣ್ಣ ಎಂದು ಉಪ ತಹಸೀಲ್ದಾರ್ ರಾಜೇಶ್ ನಾಯ್ಕ್ ಹೇಳಿದರು.
ಬಿ ಸಿ ರೋಡಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಶುಕ್ರವಾರ ಸರಳ ರೀತಿಯಲ್ಲಿ ನಡೆದ ಬಸವಣ್ಣ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭ ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಕರಣಿಕರು, ಗ್ರಾಮ ಸಹಾಯಕರು, ಉಪಸ್ಥಿತರಿದ್ದರು.
ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸ್ವಾಗತಿಸಿ, ವಂದಿಸಿದರು.
0 comments:
Post a Comment