ಮಂಗಳೂರು, ಮೇ 28, 2021 (ಕರಾವಳಿ ಟೈಮ್ಸ್) : ನಗರದ ಹೊರವಲಯದ ಅಡ್ಯಾರ್ ಸಮೀಪ ಶುಕ್ರವಾರ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಟ್ಯಾಂಕರಿಗೆ ಓಮ್ನಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಉಂಟಾದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮತ್ತೋವ ಗಾಯಗೊಂಡಿದ್ದಾರೆ.
ಮೃತರನ್ನು ಪುದು ಗ್ರಾಮದ ಅಮೆಮಾರ್ ನಿವಾಸಿ ದಾವೂದ್ (23) ಹಾಗೂ ಕುಂಜತ್ಕಲ ನಿವಾಸಿ ಉನೈಸ್ (26) ಎಂದು ಹೆಸರಿಸಳಾಗಿದ್ದು, ಗಾಯಾಲೂ ಆರ್ಕುಳ ನಿವಾಸಿ ಎಂದು ತಿಳಿದು ಬಂದಿದೆ. ಮೃತ ಉನೈಸ್ ಕಳೆದ ಲಾಕ್ ಡೌನ್ ಸಂದರ್ಭ ವಿವಾಹವಾಗಿದ್ದು, ಇತ್ತೀಚೆಗೆ ಪತ್ನಿ ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ 40 ದಿನಗಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಂಗಳೂರಿನ ದಕ್ಕೆಯಲ್ಲಿ ಒಣ ಮೀನು ವ್ಯಾಪಾರಿಗಳಾಗಿದ್ದ ಇವರು ಅಂಗಡಿ ಬಂದ್ ಮಾಡಿ ವಾಪಾಸು ಬರುತ್ತಿದ್ದ ವೇಳೆ ಅಡ್ಯಾರ್ ಬಳಿ ಸಂಪೂರ್ಣವಾಗಿ ಹೆದ್ದಾರಿ ಬಿಟ್ಟು ನಿಲ್ಲಿಸಲಾಗಿದ್ದ ಟ್ಯಾಂಕರಿಗೆ ಚಾಲಕನ ನಿಯಂತ್ರಣ ಮೀರಿದ ಓಮ್ನಿ ಕಾರು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
0 comments:
Post a Comment