ಬಂಟ್ವಾಳ, ಎಪ್ರಿಲ್ 24, 2021 (ಕರಾವಳಿ ಟೈಮ್ಸ್) : ರಾಜ್ಯ ಸರಕಾರ ಕೊರೋನಾ ಎರಡನೇ ಅಲೆ ಹಿನ್ನಲೆಯಲ್ಲಿ ಹೊರಡಿಸಿದ ಬದಲಾದ ಮಾರ್ಗಸೂಚಿಯನ್ನು ಜಾರಿಗೊಳಿಸಲು ಶುಕ್ರವಾರದಿಂದಲೇ ಪೊಲೀಸರು ಹಾಗೂ ಅಧಿಕಾರಿಗಳು ಬೀದಿಗಿಳಿದು ಕಠಿಣ ‘ದಂಡ’ ಪ್ರಯೋಗ ಮಾಡಿದ ಹಿನ್ನಲೆಯಲ್ಲಿ ವೀಕೆಂಡ್ ಕಫ್ರ್ಯೂವಿನ ಮೊದಲ ದಿನವಾದ ಶನಿವಾರ ವಾಹನಗಳು ಹಾಗೂ ಜನ ಯಾರೂ ರಸ್ತೆಗೆ ಇಳಿಯದೆ ಇಡೀ ಬಂಟ್ವಾಳ ಸಂಪೂರ್ಣ ಸ್ಥಬ್ಧಗೊಂಡಿದೆ.
ತಾಲೂಕಿನ ಪ್ರಮುಖ ಪಟ್ಟಣಗಳಾದ ಬಿ ಸಿ ರೋಡು, ಬಂಟ್ವಾಳ, ಫರಂಗಿಪೇಟೆ, ಕೈಕಂಬ, ತುಂಬೆ, ಪಾಣೆಮಂಗಳೂರು, ಮೆಲ್ಕಾರ್, ಕಲ್ಲಡ್ಕ, ವಿಟ್ಲ ಮೊದಲಾದೆಡೆ ಜನ ಹಾಗೂ ವಾಹನ ಸಂಚಾರ ಬೆಳಿಗ್ಗಿನಿಂದಲೇ ಸ್ಥಗಿತಗೊಂಡ ಪರಿಣಾಮ ಇಡೀ ರಸ್ತೆ ಬೀದಿಗಳು ಬಿಕೋ ಎನ್ನುತ್ತಿವೆ. ಪೊಲೀಸರು ಹಾಗೂ ಅಧಿಕಾರಿಗಳ ಜಾಗೃತಿ ರೌಂಡ್ಸ್ ಬಿಟ್ಟರೆ ಅಗತ್ಯ ಸಾಮಾಗ್ರಿ ಸಾಗಾಟದ ವಾಹನಗಳು ಮಾತ್ರ ವಿರಳ ಪ್ರಮಾಣದಲ್ಲಿ ರಸ್ತೆಯಲ್ಲಿ ಕಂಡು ಬರುತ್ತಿದೆ.
0 comments:
Post a Comment