ಮಂಗಳೂರು, ಎಪ್ರಿಲ್ 22, 2021 (ಕರಾವಳಿ ಟೈಮ್ಸ್) : ರಾಜ್ಯ ಸರಕಾರ ಕೋವಿಡ್ ಸಂಬಂಧಿ ದಿನಕ್ಕೊಂದು ಮಾರ್ಗಸೂಚಿ ಪ್ರಕಟಿಸುವ ಮೂಲಕ ಜನರನ್ನು ಗೊಂದಲ ಹಾಗೂ ಭಯದ ವಾತಾವರಣಕ್ಕೆ ನೂಕುತ್ತಿದೆ ಎಂದು ಮಂಗಳೂರು ಶಾಸಕ ಯು ಟಿ ಖಾದರ್ ಸರಕಾರದ ಮಾರ್ಗಸೂಚಿ ಕ್ರಮಕ್ಕೆ ತೀವ್ರ ಗರಂ ಆಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದ ಸರಕಾರ ಇದೀಗ ದಿಢೀರ್ ಬಂದ್ ಆದೇಶ ನೀಡುವ ಮೂಲಕ ಜನರ ಬದುಕಿನೊಂದಿಗೆ ಚೆಲ್ಲಾಟವಾಡುವ ಮೂಲಕ ತಮಾಷೆ ನೋಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಕಾರ ಹಿಂಬಾಗಿಲ ಲಾಕ್ ಡೌನ್ ಹೇರುವ ಬದಲಾಗಿ ನಿರ್ದಿಷ್ಟ ಹಾಗೂ ಸ್ಪಷ್ಟ ಆದೇಶ ನೀಡುವ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು. ಜನರನ್ನು ಗೊಂದಲಕ್ಕೆ ದೂಡುವ ಆದೇಶ ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಶಾಸಕ ಖಾದರ್ ಆಗ್ರಹಿಸಿದ್ದಾರೆ.
0 comments:
Post a Comment