ಎಪ್ರಿಲ್ 25 ರಿಂದ ಮೇ 3 ರವರೆಗೆ ಭಾರತದಿಂದ ವಿಮಾನಗಳ ಹಾರಾಟ ನಿರ್ಬಂಧಿಸಿದ ಯುಎಇ - Karavali Times ಎಪ್ರಿಲ್ 25 ರಿಂದ ಮೇ 3 ರವರೆಗೆ ಭಾರತದಿಂದ ವಿಮಾನಗಳ ಹಾರಾಟ ನಿರ್ಬಂಧಿಸಿದ ಯುಎಇ - Karavali Times

728x90

22 April 2021

ಎಪ್ರಿಲ್ 25 ರಿಂದ ಮೇ 3 ರವರೆಗೆ ಭಾರತದಿಂದ ವಿಮಾನಗಳ ಹಾರಾಟ ನಿರ್ಬಂಧಿಸಿದ ಯುಎಇ


ನವದೆಹಲಿ, ಎಪ್ರಿಲ್ 22, 2021 (ಕರಾವಳಿ ಟೈಮ್ಸ್) : ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನಲೆಯಲ್ಲಿ ಎಪ್ರಿಲ್ 25 ರಿಂದ ಮೇ 3 ರವರೆಗೆ  ಭಾರತದಿಂದ ವಿಮಾನಗಳ ಹಾರಾಟವನ್ನು ರದ್ದುಪಡಿಸುವುದಾಗಿ ಯುಎಇ ಗುರುವಾರ ಪ್ರಕಟಿಸಿದೆ.
    ಭಾರತದಿಂದ ಪ್ರಯಾಣಿಕರು ಬೇರೆ ರಾಷ್ಟ್ರಗಳ ಮೂಲಕ ಯುಎಇ ಪ್ರವೇಶಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಪ್ರಯಾಣಿಕರು ಇತರೆ ರಾಷ್ಟ್ರಗಳಲ್ಲಿ 14 ದಿನಗಳ ವಾಸ್ತವ್ಯ ಹೂಡಿದ್ದರೆ, ತದನಂತರದಲ್ಲಿ ಯುಎಇ ಪ್ರವೇಶಕ್ಕೆ ಅವಕಾಶ ಸಿಗಲಿದೆ. ಉಭಯ ರಾಷ್ಟ್ರಗಳ ನಡುವೆ ಕಾರ್ಗೊ ವಿಮಾನಗಳು ಹಾಗೂ ಯುಎಇಯಿಂದ ಭಾರತಕ್ಕೆ ಬಂದಿಳಿಯುವ ವಿಮಾನಗಳ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ.

  • Blogger Comments
  • Facebook Comments

0 comments:

Post a Comment

Item Reviewed: ಎಪ್ರಿಲ್ 25 ರಿಂದ ಮೇ 3 ರವರೆಗೆ ಭಾರತದಿಂದ ವಿಮಾನಗಳ ಹಾರಾಟ ನಿರ್ಬಂಧಿಸಿದ ಯುಎಇ Rating: 5 Reviewed By: karavali Times
Scroll to Top