ಮಂಗಳೂರು, ಎಪ್ರಿಲ್ 03, 2021 (ಕರಾವಳಿ ಟೈಮ್ಸ್) : ಕರ್ನಾಟಕ ಹಾಗೂ ಕೇರಳದಲ್ಲಿ ಹಿರಿಯ ಸುನ್ನೀ ವಿದ್ವಾಂಸರಾಗಿ ಗುರುತಿಸಿಕೊಂಡಿದ್ದ ಶೈಖುನಾ ಆಲಿಕುಂಞÂ ಉಸ್ತಾದ್ ಶಿರಿಯ (87) ಶನಿವಾರ ಬೆಳಿಗ್ಗೆ ತಮ್ಮ ಸ್ವಗೃಹವಾದ ಶಿರಿಯದಲ್ಲಿ ನಿಧನರಾದರು.
ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಉಪಾಧ್ಯಕ್ಷರಾಗಿದ್ದ ಇವರು ಕುಂಬಳೆ ಸಮೀಪದ ಶಿರಿಯ ಲತೀಫಿಯಾ ಎಜ್ಯುಕೇಶನಲ್ ಕಾಂಪ್ಲೆಕ್ಸ್ ಇದರ ಅಧ್ಯಕ್ಷರಾಗಿದ್ದರು. ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಆಲಿಕುಂಞÂ ಉಸ್ತಾದ್ ಪತ್ನಿ, 4 ಮಂದಿ ಪುತ್ರರು ಹಾಗೂ 4 ಮಂದಿ ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
0 comments:
Post a Comment