ಕಾಸರಗೋಡು, ಎಪ್ರಿಲ್ 18, 2021 (ಕರಾವಳಿ ಟೈಮ್ಸ್) : ಕರೋನಾ ವೈರಸ್ ಎರಡನೇ ಅಲೆ ಜೋರಾಗಿರುವ ಹಿನ್ನೆಲೆಯಲ್ಲಿ, ಮಸೀದಿ ಹಾಗೂ ಇತರ ಆರಾಧನಾ ಸ್ಥಳಗಳಲ್ಲಿ ಸರಕಾರವ ಸೂಚಿಸಿರುವ ಮಾರ್ಗಸೂಚಿ ಹಾಗೂ ಮುನ್ನೆಚ್ಚರಿಕಾ ಕ್ರಮಗಳು ಮತ್ತು ನಿರ್ಬಂಧಗಳನ್ನು ಜವಾಬ್ದಾರಿಯುತವಾಗಿ ಪಾಲಿಸುವಂತೆ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯಾ ತಂಙಳ್ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಮಾಸ್ಕ್ ಧರಿಸುವುದು, ಕೈ ತೊಳೆಯುವುದು ಮುಂತಾದ ಮುನ್ನೆಚ್ಚರಿಕೆಗಳನ್ನು ಎಲ್ಲಾ ವಿಶ್ವಾಸಿಗಳು ಕಟ್ಟು ನಿಟ್ಟಾಗಿ ಪಾಲಿಸಬೇಕು. ದೊಡ್ಡ ಜನಸಂದಣಿಯನ್ನು ತಪ್ಪಿಸಲು ಹಾಗೂ ಬೃಹತ್ ಇಫ್ತಾರ್ ಕೂಟಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದಿರುವ ಅವರು ಶರೀರಕ್ಕೆ ಬಾಹ್ಯವಾಗಿ ಸ್ವೀಕರಿಸುವ ಕೋವಿಡ್ ಲಸಿಕೆಯಿಂದ ಉಪವಾಸ ವೃತಕ್ಕೆ ಯಾವುದೇ ಭಂಗ ಉಂಟಾಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ.
ಕೋವಿಡ್ ಸೋಂಕಿನಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ಸಮುದಾಯವು ಮುಂದೆ ಬರಬೇಕು. ಅದೇ ರೀತಿ ಹಸಿವಿನಿಂದ ಬಳಲುತ್ತಿರುವವರಿಗೆ ಹಾಗೂ ಸಂಕಷ್ಟದಲ್ಲಿರುವವರಿಗೆ ಅಗತ್ಯ ನೆರವು ನೀಡಲು ವಿಶ್ವಾಸಿಗಳು ಮುತುವರ್ಜಿ ವಹಿಸಬೇಕು ಎಂದು ಸಯ್ಯಿದ್ ಜಿಫ್ರಿ ತಂಙಳ್ ಸಮುದಾಯಕ್ಕೆ ಸೂಚಿಸಿದ್ದಾರೆ.
0 comments:
Post a Comment