ಮಂಗಳೂರು, ಎ. 12, 2021 (ಕರಾವಳಿ ಟೈಮ್ಸ್) : ಕೇರಳ ರಾಜ್ಯದ ಕ್ಯಾಲಿಕಟ್‍ನಲ್ಲಿ ಸೋಮವಾರ ರಾತ್ರಿ ಚಂದ್ರದರ್ಶನ ಆಗಿರುವುದು ಖಚಿತಗೊಂಡಿರುವುದರಿಂದ ಎಪ್ರಿಲ್ 13 ರ ಮಂಗಳವಾರದಿಂದ ರಂಝಾನ್ ಉಪವಾಸ ವೃತಾಚರಣೆ ನಡೆಸುವಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಖಾಝಿಗಳಾದ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಾಗೂ ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮುಸ್ಲಿಮರಿಗೆ ಕರೆ ನೀಡಿದ್ದಾರೆ.
ವಿವಿಧ ಗಲ್ಫ್ ರಾಷ್ಟ್ರ್ಳಗಳಲ್ಲಿ ಭಾನುವಾರ ರಾತ್ರಿ ಚಂದ್ರದರ್ಶನ ಆಗದೆ ಇರುವ ಹಿನ್ನಲೆಯಲ್ಲಿ ಈಗಾಗಲೇ ಮಂಗಳವಾರ ರಂಝಾನ್ ತಿಂಗಳ ಮೊದಲ ದಿನ ಆರಂಭ ಎಂದು ಅಲ್ಲಿನ ಸರಕಾರ ಘೋಷಣೆ ಮಾಡಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು.
0 comments:
Post a Comment