ಬಂಟ್ವಾಳ, ಎಪ್ರಿಲ್ 22, 2021 (ಕರಾವಳಿ ಟೈಮ್ಸ್) : ತಾಲೂಕಿನ ಪಲ್ಲಮಜಲು ನಿವಾಸಿ, ಆದಿ ದ್ರಾವಿಡ ಸಮಾಜದ ಹಿರಿಯ ನಾಯಕ ರಾಜಾ ಪಲ್ಲಮಜಲು (53) ನಿಧನಕ್ಕೆ ಡಿ ಕೆ ಡಿಸ್ಟ್ರಿಕ್ಟ್ ಅಂಬೇಡ್ಕರ್ ಫೆÇೀರಂ ಫಾರ್ ಸೋಷಿಯಲ್ ಜಸ್ಟಿಸ್ ಅಧ್ಯಕ್ಷ ಭಾನುಚಂದ್ರ ಕೃಷ್ಣಾಪುರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಮುಖಂಡರೂ ಆಗಿ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ ರಾಜಾ ಪಲ್ಲಮಜಲು ಪ್ರತಿವರ್ಷ ಜಾತಿ-ಧರ್ಮ ಬೇಧ ಮರೆತು ನಿರಂತರವಾಗಿ ಉಚಿತ ಸಾಮೂಹಿಕ ವಿವಾಹ ಏರ್ಪಡಿಸುತ್ತಾ ಬಂದು ಬಂಟ್ವಾಳದಲ್ಲಿ ಜನಾನುರಾಗಿಯಾಗಿದ್ದಲ್ಲದೆ ಹಲವು ಬಡ ಜನರ ಪಾಲಿಗೆ ಆಶಾಕಿರಣರಾಗಿದ್ದರು. ದಲಿತ ಸಮುದಾಯದ ಮಂದಿಗೆ ಯಾವುದೇ ರೀತಿಯ ಅನ್ಯಾಯವಾದರೂ ತಕ್ಷಣ ಸ್ಪಂದಿಸಿ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ರಾಜಾ ಪಲ್ಲಮಜಲು ಅವರು ನಿರಂತರ ಶ್ರಮಿಸುತ್ತಿದ್ದರು. ರಾಜಾ ಪಲ್ಲಮಜಲು ಅವರ ಅಕಾಲಿಕ ಅಗಲುವಿಕೆ ಸಮುದಾಯಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು, ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ, ಸಮುದಾಯಕ್ಕೆ ಹಾಗೂ ಸಮಾಜಕ್ಕೆ ನೀಡಲಿ ಎಂದವರು ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
0 comments:
Post a Comment