ಬಂಟ್ವಾಳ, ಎಪ್ರಿಲ್ 06, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಸಿ ರೋಡು-ಅಜ್ಜಿಬೆಟ್ಟು ತಿರುವು ಬಳಿ ಭಾನುವಾರ ರಾತ್ರಿ ಮನೋಜ್ ಗಾಣಿಗ ಅವರ ಮೇಲೆ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಕೌಟುಂಬಿಕ ಕಲಹ ಸಂಬಂಧಿ ಸಂದೇಶಗಳು ಸತ್ಯಕ್ಕೆ ದೂರವಾಗಿದ್ದು, ಇಂತಹ ಸಂದೇಶ ಹರಿಬಿಟ್ಟವರ ವಿರುದ್ದ ಮಾನಹಾನಿ ಪ್ರಕರಣ ದಾಖಲಿಸಲು ಚಿಂತನೆ ನಡೆಸಿರುವುದಾಗಿ ಗಾಯಾಳು ತಂದೆ ಭೋಜ ಸಪಲ್ಯ ತಿಳಿಸಿದ್ದಾರೆ.
ಮಂಗಳವಾರ ಸಂಜೆ ಬಿ ಸಿ ರೋಡಿನಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಪೊಲೀಸರು ತಕ್ಷಣ ಪತ್ತೆ ಹಚ್ಚಿ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ಭಾನುವಾರ ರಾತ್ರಿ ಸುಮಾರು 7.30 ಗಂಟೆಗೆ ಮನೋಜ್ ಅವರನ್ನು ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದ ಅಪರಿಚಿತ ದುಷ್ಕರ್ಮಿಗಳು ಕತ್ತಿಯಿಂದ ತಲೆ, ಕೆನ್ನೆ ಹಾಗೂ ಕೈಗಳಿಗೆ ಕಡಿದು ಪರಾರಿಯಾಗಿದ್ದರು. ಗಾಯಾಳು ಮನೋಜ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೋಜ್ ಕಳೆದ 10 ವರ್ಷಗಳಿಂದ ವಿದೇಶದಲ್ಲಿ ಎಂಜಿನಿಯರ್ ಆಗಿ ದುಡಿಯುತ್ತಿದ್ದು, ಮೇ ತಿಂಗಳಲ್ಲಿ ವಿವಾಹ ನಿಶ್ಚಯ ಆಗಿರುವುದರಿಂದ 6 ತಿಂಗಳ ಹಿಂದೆ ಊರಿಗೆ ಬಂದು ಉಮನಗುಡ್ಡೆ ಮನೆಯಲ್ಲಿ ವರ್ಕ್ ಫ್ರಂ ಹೋಂ ಮಾಡುತ್ತಿದ್ದ ಎಂದ ಮನೋಜ್ ತಂದೆ ಭೋಜ ಸಪಲ್ಯ ಅವರು, ನನಗೆ ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರು ಮಾತ್ರ ಇದ್ದಾರೆ. ಆದರೆ ಈ ಕೃತ್ಯ ನಡೆದ ರಾತ್ರಿಯೇ ಇದೊಂದು ಕೌಟುಂಬಿಕ ಕಲಹ, ಅಣ್ಣ ತಮ್ಮಂದಿರ ನಡುವಿನ ವೈಷಮ್ಯ ಮತ್ತಿತರ ಮಾನಹಾನಿಕರ ಕಟ್ಟು ಕಥೆ ಹೆಣೆದು ಕೆಲವೊಂದು ವೆಬ್ ಪೋರ್ಟಲ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಪೆÇಲೀಸರ ತನಿಖೆಯ ದಿಕ್ಕು ತಪ್ಪಿಸುವುದಕ್ಕಾಗಿ ಕಿಡಿಗೇಡಿಗಳು ತಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.
ಇಂತಹ ಸುಳ್ಳು ಸುದ್ದಿ ಬಿತ್ತರಿಸಿ ನಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ಉಂಟು ಮಾಡಿರುವವರ ವಿರುದ್ಧ ಪೆÇಲೀಸರಿಗೆ ದೂರು ಸಲ್ಲಿಸಲಾಗಿದೆ. ನೈಜ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಭೋಜ ಸಪಲ್ಯ ಮಾನಹಾನಿಕರ ಹಾಗೂ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಸೈಬರ್ ಕ್ರೈಂ ಪೆÇಲೀಸರಿಗೆ ದೂರು ಸಲ್ಲಿಸಿ ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸುವುದಾಗಿ ಅವರು ಎಚ್ಚರಿಸಿದರು.
ಇಬ್ಬರು ಆರೋಪಿಗಳು ಹೆಲ್ಮೆಟ್‍ಧಾರಿಗಳಾಗಿ ದ್ವಿಚಕ್ರ ವಾಹನದಲ್ಲಿ ಬಂದು ಇರಿತ ನಡೆಸಿ ಪರಾರಿಯಾಗಿದ್ದು, ಇವರ ವಾಹನ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಪೆÇಲೀಸರು ತ್ವರಿತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ ಅವರು ಈ ಬಗ್ಗೆ ಬಂಟ್ವಾಳ ಶಾಸಕ ರಾಜೇಶ ನಾಯ್ಕ್ ಹಾಗೂ ಜಿಲ್ಲಾ ಎಸ್ಪಿಗೂ ದೂರು ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಗಾಯಾಳು ಸಂಬಂಧಿಕರಾದ ಪೂವಪ್ಪ ಸಪಲ್ಯ ದರಿಬಾಗಿಲು, ರಾಜೇಂದ್ರ ಸಪಲ್ಯ, ಪುನೀತ್ ಗಾಣಿಗ, ಗಣೇಶ್ ಉಮನಗುಡ್ಡೆ ಉಪಸ್ಥಿತರಿದ್ದರು.
0 comments:
Post a Comment