ಸೆಂಚೂರಿಯನ್, ಎಪ್ರಿಲ್ 03, 2021 (ಕರಾವಳಿ ಟೈಮ್ಸ್) : ದಕ್ಷಿಣ ಆಫ್ರಿಕಾ ವಿರುದ್ದ ಶುಕ್ರವಾರ ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಭಾರಿಸಿದ ಪಾಕ್ ತಂಡದ ನಾಯಕ ಹಾಗೂ ಆರಂಭಿಕ ದಾಂಡಿಗ ಬಾಬರ್ ಅಝಂ ಅವರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಹಾಶಿಂ ಆಮ್ಲ ಅವರ ದಾಖಲೆ ಮುರಿದಿದ್ದಾರೆ.
ಬಾಬರ್ ಅಜಂ ಈ ಪಂದ್ಯದಲ್ಲಿ 104 ಎಸೆತಗಳಲ್ಲಿ 103 ರನ್ ಸಿಡಿಸಿ ತಂಡದ ಜಯದಲ್ಲಿ ಪಾತ್ರ ವಹಿಸಿದ್ದರು. ಈ ಮೂಲಕ ತಮ್ಮ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟಿನ 13ನೇ ಶತಕ ಸಿಡಿಸಿದ ಅವರು ವೇಗವಾಗಿ 13 ಶತಕ ಸಿಡಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಬಾಬರ್ ಅಜಂಗೆ ಇದು 78ನೇ ಅಂತಾರಾಷ್ಟ್ರೀಯ ಹಾಶಿಂ ಆಮ್ಲಾ ಹಾಗೂ ಭಾರತದ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ. ಹಾಶಿಂ ಆಮ್ಲಾ 13 ಶತಕ ಸಿಡಿಸಲು 83 ಇನ್ನಿಂಗ್ಸ್ ತೆಗೆದುಕೊಂಡಿದ್ದರೆ, ಕೊಹ್ಲಿ 86 ಇನ್ನಿಂಗ್ಸ್ ತೆಗೆದುಕೊಂಡಿದ್ದರು.
ಶುಕ್ರವಾರ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡದ ಪಂದ್ಯ ಕೊನೆಯ ಎಸೆತದವರೆಗೂ ಕುತೂಹಲ ಮೂಡಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡವು ವ್ಯಾನ್ ಡರ್ ಡಸೆ (123 ರನ್) ಶತಕದ ನೆರವಿನಿಂದ 50 ಓವರ್‍ಗಳಲ್ಲಿ 6 ವಿಕೆಟ್‍ಗಳಿಗೆ 273 ರನ್ ಗಳಿಸಿತು. ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ್ದ ಪಾಕ್ ತಂಡವು ಬಾಬರ್ ಆಜಂ (103; 104 ಎಸೆತ) ಅವರ ಶತಕದ ನೆರವಿನಿಂದ 50 ಓವರ್‍ಗಳಲ್ಲಿ 7 ವಿಕೆಟ್‍ಗಳಿಗೆ 274 ರನ್ ಗಳಿಸಿ 3 ವಿಕೆಟ್ ಅಂತರದಲ್ಲಿ ಜಯಿಸಿತು. ಪ್ರಸ್ತುತ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಭಾನುವಾರ 2ನೇ ಪಂದ್ಯ ನಡೆಯಲಿದೆ.
0 comments:
Post a Comment