ಬೆಂಗಳೂರು, ಎಪ್ರಿಲ್ 22, 2021 (ಕರಾವಳಿ ಟೈಮ್ಸ್) : ಕೋವಿಡ್ 2ನೇ ಅಲೆಯ ವ್ಯಾಪಕತೆ ಹಿನ್ನಲೆಯಲ್ಲಿ ರಾಜ್ಯ ಸರಕಾರ ಘೋಷಿಸಿದ ರಾತ್ರಿ ಕಫ್ರ್ಯೂ ಬುಧವಾರ ರಾತ್ರಿ 9 ಗಂಟೆಯಿಂದ ರಾಜ್ಯಾದ್ಯಂತ ಆರಂಭಗೊಂಡಿದ್ದು, ಎಲ್ಲೆಡೆ ಕಠಿಣವಾಗಿದೆ. ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಅದರಲ್ಲೂ ಸೋಂಕು ಅತೀ ಹೆಚ್ಚಿರು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟೈಟ್ ಕಫ್ರ್ಯೂ ಪರಿಸ್ಥಿತಿ ಇದ್ದು, ನಗರದ ಎಲ್ಲಾ ಮೇಲ್ಸೇತುವೆಗಳನ್ನು ಬಂದ್ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡರ್ ಅಳವಡಿಸಿ ನಾಕಾಬಂದಿ ನಿರ್ಮಾಣ ಮಾಡಿದ್ದು, ವಾಹನ ಹಾಗೂ ಜನ ಸಂಚಾರವನ್ನು ನಿರ್ಬಂಧಿಸಿದ್ದಾರೆ. ಮುಂಜಾನೆ 6 ಗಂಟೆವರೆಗೂ ಕಫ್ರ್ಯೂ ಜಾರಿಯಲ್ಲಿರಲಿದೆ.
ನೈಟ್ ಕಫ್ರ್ಯೂ ವೇಳೆ ಯಾರಿಗೂ ಪಾಸ್ ವಿತರಿಸಲಾಗಿಲ್ಲ. ಅನಗತ್ಯವಾಗಿ ಹೊರ ಬಂದರೆ ವಾಹನಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಅಗತ್ಯ ಸೇವೆಗಳ ಓಡಾಟಕ್ಕೆ ದಾಖಲೆ ಅಗತ್ಯ ಎಂದು ಬೆಂಗಳೂರು ಪೆÇಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ನೈಟ್ ಕರ್ಫ್ಯೂ ಆರಂಭವಾಗಿದೆ. ರಾತ್ರಿ 9 ಗಂಟೆ ಆಗುತಿದ್ದಂತೆ ಪೆÇಲೀಸರು ಅಂಗಡಿಗಳನ್ನು ಮುಚ್ಚುವಂತೆ ಸೂಚಿಸುತ್ತಿದ್ದಾರೆ. ನಗರಗಳ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್ ಅಳವಡಿಸಿ ನಿರ್ಬಂಧಿಸಿರುವ ಪÉÇಲೀಸರು, ಧ್ವನಿವರ್ದಕ ಬಳಸಿ ಜನರನ್ನು ಜಾಗೃತಗೊಳಿಸುತ್ತಿದ್ದಾರೆ.
0 comments:
Post a Comment