ನಿಲ್ಲದ ಕೋವಿಡ್ ಏರುಗತಿ : ಮತ್ತೆ ಕಠಿಣ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ ಸರಕಾರ - Karavali Times ನಿಲ್ಲದ ಕೋವಿಡ್ ಏರುಗತಿ : ಮತ್ತೆ ಕಠಿಣ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ ಸರಕಾರ - Karavali Times

728x90

2 April 2021

ನಿಲ್ಲದ ಕೋವಿಡ್ ಏರುಗತಿ : ಮತ್ತೆ ಕಠಿಣ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ ಸರಕಾರ

 
ಬೆಂಗಳೂರು, ಎ. 03, 2021 (ಕರಾವಳಿ ಟೈಮ್ಸ್) :
ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಮತ್ತೆ ಕಠಿಣ ನಿಯಮ ಘೋಷಿಸಿ ಆದೇಶ ಹೊರಡಿಸಿದೆ. 


    ಕೋವಿಡ್ ಸೋಂಕು ನಿಯಂತ್ರಣಕ್ಕೆ ಲಸಿಕೆ ಅಭಿಯಾನ ಚುರುಕುಗೊಳಿಸಲು ಇದೇ ವೇಳೆ ಸರಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಲಾಕ್‍ಡೌನ್, ಸೆಮಿ ಲಾಕ್‍ಡೌನ್ ಅಥವಾ ರಾತ್ರಿ ಕಫ್ರ್ಯೂ ಬಗ್ಗೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಸರಕಾರ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.


    ಶುಕ್ರವಾರ ವಿಧಾನಸೌಧದಲ್ಲಿ ನಡೆದ ಆರೋಗ್ಯ ಇಲಾಖೆ ಸಹಿತ ಇತರ ಇಲಾಖಾಧಿಕಾರಿಗಳ ಸಭೆಯ ಬಳಿಕ ಅವರು ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು. 


    ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯಿದೆ ಉಲ್ಲಂಘನೆ ಮಾಡಿದರೆ ಕ್ರಮ ಜರುಗಿಸಬೇಕು. ಕೈಗಾರಿಕಾ ಪ್ರದೇಶ ಮತ್ತು ಅಪಾರ್ಟ್‍ಮೆಂಟ್‍ಗಳಲ್ಲಿ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. ಕೇಂದ್ರದಿಂದ ಮಾಸ್ಕ್, ಸಾಮಾಜಿಕ ಅಂತರ, ನಿಯಮಗಳ ಬಿಗಿ ಪಾಲನೆಗೆ ಸೂಚಿಸಿದ್ದಾರೆ. ರಾಜ್ಯದಲ್ಲೂ ಕಟ್ಟುನಿಟ್ಟಿನ ಪರಿಪಾಲನೆಗೆ ಒತ್ತು ನೀಡಲಾಗುವುದು ಎಂದವರು ಹೇಳಿದರು.


    ಕೋವಿಡ್‍ಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 20ರಷ್ಟು ಹಾಸಿಗೆ ಮೀಸಲಿಡಲಾಗಿದೆ. ಜಾತ್ರೆಗಳಿಗೆ ಬ್ರೇಕ್ ಹಾಕಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದೆ ಎಂದ ಅವರು ಲಸಿಕೆ ಹಾಕುವ ಪ್ರಕ್ರಿಯೆಯನ್ನು ಹೆಚ್ಚಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಜಾತ್ರೆ, ಉತ್ಸವಗಳನ್ನು ನಿಯಂತ್ರಿಸಿದ್ದೇವೆ. ಶಾಲೆಗಳನ್ನು ಭೌತಿಕವಾಗಿ ನಡೆಸುವುದು ಬೇಡ ಎಂದೂ ನಿರ್ಧರಿಸಲಾಗಿದೆ ಎಂದು ರವಿಕುಮಾರ್ ಸ್ಪಷ್ಟಪಡಿಸಿದರು.


    ಇದೇ ವೇಳೆ ನೂತನ ಕೋವಿಡ್ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಬೆಂಗಳೂರು ನಗರ ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಚಿತ್ರ ಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ರಾಜ್ಯಾದ್ಯಂತ ಜಿಮ್ ಮತ್ತು ಸ್ವಿಮ್ಮಿಂಗ್ ಪೂಲ್‍ಗಳನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ಸಾರಿಗೆ ಬಸ್ ಗಳಲ್ಲಿ ನಿಗದಿತ ಆಸನದ ಮೀತಿ ಮೀರುವಂತಿಲ್ಲ. ಬಸ್ಸುಗಳಲ್ಲಿ ನಿಂತುಕೊಂಡು ಪ್ರಯಾಣಿಸುವುದನ್ನು ನಿರ್ಬಂಧಿಸಲಾಗಿದೆ. ರಾಜ್ಯಾದ್ಯಾಂತ ವಿದ್ಯಾಗಮ ಸೇರಿದಂತೆ ಎಲ್ಲಾ ಶೈಕ್ಷಣಿಕ ಚಟುವಟಿಕೆ ಬಂದ್ ಮಾಡಲಾಗುವುದು, ಯಾವುದೇ ರೀತಿಯ, ರ್ಯಾಲಿ, ಮುಷ್ಕರ ನಡೆಸುವಂತಿಲ್ಲ ಧಾರ್ಮಿಕ ಆಚರಣೆ, ಜಾತ್ರೆ ನಿಷೇಧ. ಎಪ್ರಿಲ್ 20ರವರೆಗೆ ಈ ಮಾರ್ಗಸೂಚಿ ಅನ್ವಯವಾಗಲಿದೆ ಎಂದರು. 


    ಹೊಸ ಮಾರ್ಗಸೂಚಿ ಪ್ರಕಾರ ರಾಜ್ಯಾದ್ಯಂತ ಜಿಮ್ ಮತ್ತು ಸ್ವಿಮ್ಮಿಂಗ್ ಪೂಲ್‍ಗಳನ್ನು ಸಂಪೂರ್ಣ ಬಂದ್, ಸಾರಿಗೆ ಬಸ್‍ಗಳಲ್ಲಿ ನಿಗದಿತ ಆಸನದ ಮೀತಿ ಮೀರುವಂತಿಲ್ಲ, ರಾಜ್ಯಾದ್ಯಾಂತ ವಿದ್ಯಾಗಮ ಸೇರಿದಂತೆ ಎಲ್ಲಾ ಶೈಕ್ಷಣಿಕ ಚಟುವಟಿಕೆ ಬಂದ್, ಯಾವುದೇ ರೀತಿಯ, ರ್ಯಾಲಿ, ಮುಷ್ಕರ ನಡೆಸುವಂತಿಲ್ಲ ಧಾರ್ಮಿಕ ಆಚರಣೆ, ಜಾತ್ರೆಗಳನ್ನು ನಿಷೇಧಿಸಲಾಗಿದೆ., ರಾಜ್ಯಾದ್ಯಂತ 6 ರಿಂದ 9 ತರಗತಿಗಳು ಬಂದ್, 11 ಮತ್ತು 12 ತರಗತಿಗಳು ಅಸ್ತಿತ್ವದಲ್ಲಿರುವ ಮೋಡ್‍ನಲ್ಲಿ ಮುಂದುವರಿಯಬಹುದು. ಆದಾಗ್ಯೂ, ಈ ತರಗತಿಗಳಿಗೆ ವೈಯಕ್ತಿಕವಾಗಿ ಹಾಜರಾಗುವುದು ಕಡ್ಡಾಯವಲ್ಲ., ಬೋರ್ಡ್/ ಯೂನಿವರ್ಸಿಟಿ ಪರೀಕ್ಷೆಗಳು ಮತ್ತು ಆರೋಗ್ಯ ವಿಜ್ಞಾನಗಳ ತರಗತಿಗಳನ್ನು ಹೊರತುಪಡಿಸಿ ಉನ್ನತ ಮತ್ತು ವೃತ್ತಿಪರ ಕೋರ್ಸ್‍ಗಳ ತರಗತಿಗಳನ್ನು ಅಮಾನತುಗೊಳಿಸಲಾಗುತ್ತದೆ. ಉನ್ನತ ಮತ್ತು ವೃತ್ತಿಪರ ಕೋರ್ಸ್‍ಗಳ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರೆ ಬೋರ್ಡಿಂಗ್ ಶಾಲೆಗಳು ಮತ್ತು ವಸತಿ ವಸತಿ ನಿಲಯಗಳನ್ನು ಮುಚ್ಚಬೇಕು., ಪೂಜಾ ಸ್ಥಳಗಳಲ್ಲಿ ವ್ಯಕ್ತಿಗಳಿಗೆ ಮಾತ್ರ ಭೇಟಿ ನೀಡಲು ಮತ್ತು ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಲಾಗಿದೆ. ಯಾವುದೇ ಕೂಟಗಳು, ಕಾರ್ಯಗಳು ಇತ್ಯಾದಿ ನಿಷೇಧಿಸಲಾಗಿದೆ., ಅಪಾರ್ಟ್‍ಮೆಂಟ್‍ಗಳಲ್ಲಿ ಜಿಮ್, ಪಾರ್ಟಿ ಹಾಲ್, ಕ್ಲಬ್ ಹೌಸ್, ಈಜು ಕೊಳ ಮುಂತಾದ ಸಾಮಾನ್ಯ ಸೌಲಭ್ಯಗಳು ಬಂದ್ ಮಾಡಬೇಕು., ಮನೆಯಿಂದ ಕೆಲಸದ ಅಭ್ಯಾಸವನ್ನು ಸಾಧ್ಯವಾದಷ್ಟು ಕಚೇರಿಗಳು ಮತ್ತು ಕೆಲಸದ ಸ್ಥಳಗಳಲ್ಲಿ ಅನುಸರಿಸಬೇಕು., ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಕಲ್ಬುರ್ಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಪಬ್‍ಗಳು, ಬಾರ್‍ಗಳು, ಕ್ಲಬ್‍ಗಳು, ರೆಸ್ಟೋರೆಂಟ್‍ಗಳಲ್ಲಿನ ಗ್ರಾಹಕರ ಸಂಖ್ಯೆ ಶೇ.50 ಮೀರಬಾರದು.

  • Blogger Comments
  • Facebook Comments

0 comments:

Post a Comment

Item Reviewed: ನಿಲ್ಲದ ಕೋವಿಡ್ ಏರುಗತಿ : ಮತ್ತೆ ಕಠಿಣ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ ಸರಕಾರ Rating: 5 Reviewed By: karavali Times
Scroll to Top