ಬಂಟ್ವಾಳ, ಎಪ್ರಿಲ್ 28, 2021 (ಕರಾವಳಿ ಟೈಮ್ಸ್) : ನೇರಳಕಟ್ಟೆ ಫ್ರೆಂಡ್ಸ್ ಕ್ಲಬ್ ನೇರಳಕಟ್ಟೆ ಇದರ ವತಿಯಿಂದ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅದ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಎ 27 ರಂದು ಮಂಗಳವಾರ ಪಂಚಾಯತ್ ಕಛೇರಿಯಲ್ಲಿ ನಡೆಯಿತು.
ಡಿ.ಕೆ. ಸ್ವಾಮೀಜಿ ನೇರಳಕಟ್ಟೆ ಅವರು ಸದಸ್ಯರನ್ನು ಸನ್ಮಾನಿಸಿದರು. ಕ್ಲಬ್ ಅದ್ಯಕ್ಷ ಲತೀಫ್ ನೇರಳಕಟ್ಟೆ ಅದ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ರಾಮಚಂದ್ರ ಮಾಸ್ಟರ್ ಶುಭ ಹಾರೈಸಿದರು.
ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅದ್ಯಕ್ಷ ಸತೀಶ ಪೂಜಾರಿ, ಉಪಾಧ್ಯಕ್ಷೆ ಶಕೀಲಾ ಕೆ. ಪೂಜಾರಿ ಹಾಗೂ ಸದಸ್ಯರುಗಳಾದ ಕೆ. ಶ್ರೀಧರ್ ರೈ ಕುರ್ಲೆತ್ತಿಮಾರು, ಧನುಂಜಯ ಗೌಡ ಮೀನಾವು, ಅಶೋಕ ರೈ ಎಲ್ಕಾಜೆ, ಸಮಿತಾ ಡಿ. ಪೂಜಾರಿ, ಪ್ರೇಮಾ, ಜಯಂತಿ ಹರೀಶ್ ಪೂಜಾರಿ ಹಾಗೂ ಶಾಲಿನಿ ಹರೀಶ್ ಅವರು ಅಭಿನಂದನೆ ಸ್ವೀಕರಿಸಿದರು.
ಈ ಸಂದರ್ಭ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಅಜಿತ್ ಕುಮಾರ್, ನಿಶಾಂತ್, ಸಿಬಂದಿಗಳಾದ ಶಶಿಧರ, ಸೌಮ್ಯ, ದೀಪ್ತಿ, ಅಬೂಬಕ್ಕರ್ ಎನ್.ಕೆ, ಫ್ರೆಂಡ್ಸ್ ಕ್ಲಬ್ ಸದಸ್ಯರುಗಳಾದ ಅಶ್ರಫ್ ಕೊಡಾಜೆ, ಸಂಶುದ್ದೀನ್ ಗೋಳಿಕಟ್ಟೆ, ರಾಝಿಕ್ ಕೊಡಾಜೆ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment