ಎಪ್ರಿಲ್ 11 ರಂದು ನೇರಳಕಟ್ಟೆಯಲ್ಲಿ ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ ಸಮಾರಂಭ - Karavali Times ಎಪ್ರಿಲ್ 11 ರಂದು ನೇರಳಕಟ್ಟೆಯಲ್ಲಿ ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ ಸಮಾರಂಭ - Karavali Times

728x90

9 April 2021

ಎಪ್ರಿಲ್ 11 ರಂದು ನೇರಳಕಟ್ಟೆಯಲ್ಲಿ ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ ಸಮಾರಂಭ


ಬಂಟ್ವಾಳ, ಎಪ್ರಿಲ್ 09, 2021 (ಕರಾವಳಿ ಟೈಮ್ಸ್) : ನೇರಳಕಟ್ಟೆ ಫ್ರೆಂಡ್ಸ್, ನೇರಳಕಟ್ಟೆ ಇದರ ಆಶ್ರಯದಲ್ಲಿ ದ.ಕ. ಜಿಲ್ಲೆ ಮತ್ತು ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ಸಹಕಾರದೊಂದಿಗೆ ಜಿಲ್ಲಾ ಮಟ್ಟದ ಗ್ರಾಮ ಸೀಮಿತ ತಂಡಗಳ ಕಬಡ್ಡಿ ಪಂದ್ಯಾಟ, ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ಎಪ್ರಿಲ್ 11 ರಂದು ಬಾನುವಾರ ಅಪರಾಹ್ನ 2 ಗಂಟೆಯಿಂದ ನೇರಳಕಟ್ಟೆ ಡಿ.ಕೆ. ಸ್ವಾಮಿ ಶ್ರದ್ದಾ ಕೇಂದ್ರದ ಆವರಣದಲ್ಲಿ ನಡೆಯಲಿದೆ. 

ಶ್ರೀ ಡಿ.ಕೆ. ಸ್ವಾಮೀಜಿ ಪಂದ್ಯಾಟ ಉದ್ಘಾಟಿಸಲಿದ್ದು, ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ಅಧ್ಯಕ್ಷ ಬೇಬಿ ಕುಂದರ್ ಅಧ್ಯಕ್ಷತೆ ವಹಿಸುವರು. ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವ ಬಿ ರಮಾನಾಥ ರೈ ವಹಿಸಲಿದ್ದು, ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಸಾಧಕರನ್ನು ಸನ್ಮಾನಿಸುವರು. ವಿಶೇಷ ಆಹ್ವಾನಿತರಾಗಿ ಬಂದರು ಹಾಗೂ ಮೀನುಗಾರಿಕಾ ಸಚಿವ ಎಸ್. ಅಂಗಾರ, ಶಾಸಕರಾದ ಯು ಟಿ ಖಾದರ್, ಸಂಜೀವ ಮಠಂದೂರು, ಪುತ್ತೂರು ಮಹಿಳಾ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ತಿಮ್ಮಪ್ಪ ನಾೈಕ್, ಪುತ್ತೂರು ಅಬಕಾರಿ ಉಪನಿರೀಕ್ಷಕರಾದ ಶ್ರೀಮತಿ ಸುಜಾತ, ಬಂಟ್ವಾಳ ಉಪತಹಶೀಲ್ದಾರ್ ರಾಜೇಶ್ ನಾೈಕ್, ಮೆಸ್ಕಾಂ ಮಾಣಿ ಶಾಖಾ ಜೆಇ ದಿನೇಶ್ ಕೆ., ಮಂಗಳೂರು ವಿವಿ ಮಾಜಿ ಕಬಡ್ಡಿ ತಂಡದ ನಾಯಕ ಮುಹಮ್ಮದ್ ಯೂಸುಫ್ ಗೋಳ್ತಮಜಲು, ಚಲನಚಿತ್ರ ನಟ ಚೇತನ್ ರೈ ಮಾಣಿ, ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ದಾಸ್ ಕೊಟ್ಟಾರಿ ಭಾಗವಹಿಸುವರು.  

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನೇರಳಕಟ್ಟೆ ಸಿ.ಎ. ಬ್ಯಾಂಕ್ ನಿರ್ದೇಶಕ ನಿರಂಜನ ರೈ ಕುರ್ಲೆತ್ತಿಮಾರು ವಹಿಸಲಿದ್ದು, ಉದ್ಯಮಿಗಳಾದ ರಾಜಶೇಖರ್ ಬೆಂಗಳೂರು, ಹುಸೈನ್ ಪುತ್ತೂರು ಹಾಗೂ ರಾಜೀವ್ ಭಗವಂತಕೋಡಿ ವಿಜೇತರಿಗೆ ಬಹುಮಾನ ವಿತರಿಸುವರು. 

ಇದೇ ವೇಳೆ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಪೊಲೀಸ್ ಅಧಿಕಾರಿ ಟಿ ಡಿ ನಾಗರಾಜ್, ಹಾಸನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಾ ಅಬ್ದುಲ್ ಬಶೀರ್ ವಿ.ಕೆ., ಶ್ರೀ ಡಿ.ಕೆ. ಸ್ವಾಮಿ ನೇರಳಕಟ್ಟೆ, ಮುಖ್ಯಮಂತ್ರಿ ರೈತ ರತ್ನ ಪ್ರಶಸ್ತಿ ಪುರಸ್ಕøತ ನಾಗರಾಜ್ ಶೆಟ್ಟಿ ಮಾಣಿ, ರಾಷ್ಟ್ರೀಯ ಕಬಡ್ಡಿ ಆಟಗಾರ ಉದಯಕುಮಾರ್ ಚೌಟ ಮಾಣಿ, ವಿಟ್ಲ ಪೊಲೀಸ್ ಠಾಣಾ ಎಸ್ಸೈ ವಿನೋದ್ ರೆಡ್ಡಿ ಅವರನ್ನು ಸನ್ಮಾನಿಸಲಾಗುವುದು. 

ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ಉಪಾಧ್ಯಕ್ಷೆ ಶಕೀಲಾ ಕೆ. ಪೂಜಾರಿ, ಸದಸ್ಯರುಗಳಾದ ಕೆ. ಶ್ರೀಧರ ರೈ ಕುರ್ಲೆತ್ತಿಮಾರು, ಲತೀಫ್ ನೇರಳಕಟ್ಟೆ, ಅಶೋಕ್ ರೈ ಎಲ್ಕಾಜೆ, ಧನುಂಜಯ ಮೀನಾವು, ಸಮಿತಾ ಡಿ.ಪೂಜಾರಿ, ಪ್ರೇಮಾ, ಜಯಂತಿ ಹರೀಶ್ ಪೂಜಾರಿ, ಶಾಲಿನಿ ಹರೀಶ್, ಲಕ್ಷ್ಮೀ ಕೂಸಪ್ಪ, ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಅನಂತಾಡಿ ಗ್ರಾ ಪಂ ಅಧ್ಯಕ್ಷ ಗಣೇಶ್ ಪೂಜಾರಿ, ಇಡ್ಕಿದು ಗ್ರಾ ಪಂ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕೆದಿಲ ಗ್ರಾ ಪಂ ಉಪಾಧ್ಯಕ್ಷ ಉಮೇಶ್ ಮುರುವ, ಪೆರಾಜೆ ಗ್ರಾ ಪಂ ಉಪಾಧ್ಯಕ್ಷ ಎಸ್ ಉಮ್ಮರ್ ಬುಡೋಳಿ ಅವರುಗಳನ್ನು ಅಭಿನಂದಿಸಲಾಗುವುದು ಎಂದು ನೇರಳಕಟ್ಟೆ ಫ್ರೆಂಡ್ಸ್ ಅಧ್ಯಕ್ಷ ಲತೀಫ್ ನೇರಳಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಎಪ್ರಿಲ್ 11 ರಂದು ನೇರಳಕಟ್ಟೆಯಲ್ಲಿ ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ ಸಮಾರಂಭ Rating: 5 Reviewed By: karavali Times
Scroll to Top