ಮಂಗಳೂರು, ಎ. 01, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಮದರಸ ಮೆನೇಜ್‍ಮೆಂಟ್ ಕಾನೂನು ಸಲಹೆಗಾರಾಗಿ ನ್ಯಾಯವಾದಿ ಹಾಜಿ ಕೆ.ಎಂ. ಸಿದ್ದೀಕ್ ಪುತ್ತೂರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಮಂಗಳೂರಿನ ಸಮಸ್ತ ಕಛೇರಿಯಲ್ಲಿ ಮದರಸ ಮೆನೇಜ್‍ಮೆಂಟ್ ಅದ್ಯಕ್ಷ ಮೊಹಿದಿನಬ್ಬ ಹಾಜಿಯವರ ಅದ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ ಸರ್ವಾನುಮತದಿಂದ ಈ ಆಯ್ಕೆ ನಡೆದಿದೆ ಎಂದು ದ.ಕ. ಜಿಲ್ಲಾ ಮದರಸ ಮೆನೇಜ್‍ಮೆಂಟ್ ಪ್ರಧಾನ ಕಾರ್ಯದರ್ಶಿ ಹಾಜಿ ಕೆ. ಮುಹಮ್ಮದ್ ರಫೀಕ್ ಕೊಡಾಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
0 comments:
Post a Comment