ಮಂಗಳೂರು, ಎಪ್ರಿಲ್ 22, 2021 (ಕರಾವಳಿ ಟೈಮ್ಸ್) : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡುವ ಟ್ರಕ್ ಕಂಕನಾಡಿ ಮಾರ್ಕೆಟಿನಲ್ಲಿ ಗುರುವಾರ ಬೆಳಿಗ್ಗೆ ಚಾಲಕನ ನಿರ್ಲಕ್ಷ್ಯದಿಂದಾಗಿ ಅಂಗಡಿಗೆ ನುಗ್ಗಿದ ಪರಿಣಾಮ ಅಂಗಡಿ ಸಹಿತ ಹಲವು ವಾಹನಗಳು ಜಖಂಗೊಂಡಿದೆ.
ಘಟನೆಯಿಂದ 3 ಕಾರು, ಟೆಂಪೆÇೀ, ಬೈಕ್ ಹಾಗೂ ಎರಡು ಅಂಗಡಿಗಳಿಗೆ ಹಾನಿಯಾಗಿದೆ. ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಾಲಕ ಟ್ರಕ್ಕನ್ನು ಚಾಲನಾ ಸ್ಥಿತಿಯಲ್ಲೇ ನಿಲ್ಲಿಸಿ, ಕೆಳಗಿಳಿದು ಮೊಬೈಲ್ ಮೂಲಕ ಮಾತನಾಡುತ್ತಿದ್ದ ವೇಳೆ ಚಾಲನಾ ಸ್ಥಿತಿಯಲ್ಲಿದ್ದ ಟ್ರಕ್ ವೇಗವಾಗಿ ಮುಂದಕ್ಕೆ ಚಲಿಸಿದ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಘಟನೆಯ ದೃಶ್ಯ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಂಕನಾಡಿ ನಗರ ಸಂಚಾರಿ ಪೆÇಲೀಸರು ಸ್ಥಳಕ್ಕಾಗಮಿಸಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂಗಡಿಗೆ ನುಗ್ಗಿದ ಟ್ರಕ್‍ನ್ನು ಬಳಿ ಕ್ರೇನ್ ಬಳಸಿ ತೆರವುಗೊಳಿಸಲಾಗಿದೆ.
0 comments:
Post a Comment