ಬಂಟ್ವಾಳ, ಎಪ್ರಿಲ್ 22, 2021 (ಕರಾವಳಿ ಟೈಮ್ಸ್) : ತಾಲೂಕಿನ ಕಜೆ-ಖ್ವಾಜಾ ನಗರದ ಎಕೆಎಂ ಅರಬಿಕ್ ಕಾಲೇಜಿನಲ್ಲಿ ಸ್ವಲಾತ್ ಮಜ್ಲಿಸ್ ಅಜ್ಮೀರ್ ಮೌಲಿದ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಪ್ರಾರ್ಥನೆಗೆ ನೇತೃತ್ವ ನೀಡಿದ ಸಯ್ಯದ್ ಇಬ್ರಾಹಿಂ ಬಾದುಷಾ ತಂಙಳ್ ಆನೆಕಲ್ಲು ಅವರು ಮಾತನಾಡಿ, ಸಂಪತ್ತಿನ ಒಡೆಯರು ತಾವು ನೀಡುವ ದಾನಗಳ ಬಗ್ಗೆ ಸಮಾಜದಲ್ಲಿ ಹೇಳಿಕೊಳ್ಳುತ್ತಾ ನಡೆದುಕೊಳ್ಳಬಾರದು. ನೀಡಿದ ದಾನ ತನಗೂ ಅಲ್ಲಾಹನಿಗೆ ಬಿಟ್ಟರೆ 3ನೇ ವ್ಯಕ್ತಿಗೆ ತಿಳಿಯುವಂತಾಗಬಾರದು. ಹಾಗಿದ್ದಲ್ಲಿ ಮಾತ್ರ ಅದಕ್ಕೆ ಅಲ್ಲಾಹನ ಬಳಿ ಪ್ರತಿಫಲ ದೊರೆಯಲು ಸಾಧ್ಯ. ಹೀಗಿರುತ್ತಾ ದಾನದ ರಹಸ್ಯ ಸೋರಿಕೆಯಾಗುವ ಬಗ್ಗೆ ಜನ ಅತ್ಯಂತ ಎಚ್ಚರಿಕೆ ವಹಿಸಬೇಕಾಗಿದೆ ಎಂದು ತಾಕೀತು ಮಾಡಿದರು.
ಕಾಲೇಜು ಪ್ರಧಾನ ಕಾರ್ಯದರ್ಶಿ ಉಸ್ತಾದ್ ಇಕೆಎಂ ಶರೀಫ್ ಮುಸ್ಲಿಯಾರ್ ಸ್ವಲಾತ್ ಮಜ್ಲಿಸ್ ಹಾಗೂ ಅಜ್ಮೀರ್ ಮೌಲಿದ್ ನೇತೃತ್ವ ವಹಿಸಿದ್ದರು. ಪಾತೂರು ಜುಮ್ಮಾ ಮಸೀದಿ ಖತೀಬ್ ಅಬೂಬಕರ್ ಮದನಿ ಫಿತ್ರ್ ಝಕಾತ್ ಉಪನ್ಯಾಸ ನೀಡಿದರು.
0 comments:
Post a Comment