ಮಂಗಳೂರು, ಎಪ್ರಿಲ್ 04, 2021 (ಕರಾವಳಿ ಟೈಮ್ಸ್) : ಕೆ.ಸಿ.ರೋಡ್ ಬಳಿ 12 ವರ್ಷ ಪ್ರಾಯದ ಬಾಲಕನ ಮೃತದೇಹ ಕೊಲೆಯಾದ ರೀತಿಯಲ್ಲಿ ಪತ್ತೆಯಾದ ಸುದ್ದಿ ಕೇಳಿ ತೀವ್ರ ದಿಗ್ಭ್ರಮೆಯಾಗಿದೆ ಎಂದು ಕ್ಷೇತ್ರದ ಶಾಸಕ ಯು ಟಿ ಖಾದರ್ ಖೇದ ವ್ಯಕ್ತಪಡಿಸಿದ್ದಾರೆ.
ಕೇರಳ ವಿಧಾನಸಭಾ ಚುನಾವಣೆಯ ಪ್ರಚಾರದ ಉಸ್ತುವಾರಿ ಹೊತ್ತು ಕಾರ್ಯಪ್ರವೃತ್ತರಾಗಿರುವ ಅವರು ಘಟನೆ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಈಗಾಗಲೇ ಈ ಬಗ್ಗೆ ಪೆÇೀಲೀಸ್ ಕಮೀಷನರ್ ಜೊತೆ ಮಾತುಕತೆ ನಡೆಸಿದ್ದು ಇಲಾಖೆ ತಕ್ಷಣ ಕಾರ್ಯ ಪ್ರವೃತ್ತರಾಗಿ ತನಿಖೆ ನಡೆಸಿ ಸತ್ಯಾ ಸತ್ಯತೆಯನ್ನು ಬಯಲು ಮಾಡಬೇಕು. ಕೃತ್ಯ ಎಸಗಿದವರನ್ನು ಆದಷ್ಟು ಶೀಘ್ರ ಪತ್ತೆ ಹಚ್ಚಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದೇನೆ ಎಂದಿದ್ದಾರೆ.
0 comments:
Post a Comment