ಮಂಗಳೂರು, ಎಪ್ರಿಲ್ 04, 2021 (ಕರಾವಳಿ ಟೈಮ್ಸ್) : ಕೆ.sಸಿರೋಡಿನಲ್ಲಿ ನಡೆದ 12 ವರ್ಷದ ಬಾಲಕನ ಕೊಲೆ ಪ್ರಕರಣದ ಬಗ್ಗೆ ವಿವಿಧ ಆಯಾಮಗಳ ಮೂಲಕ ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿ ಒತ್ತಾಯಿಸಿದೆ.
ಕೆ.ಸಿ.ರೋಡು ನಿವಾಸಿ ಹನೀಫ್ ಎಂಬವರ ಪುತ್ರ ಹಾಕಿಫ್ ಎಂಬಾತ ನಿನ್ನೆ ರಾತ್ರಿಯಿಂದ ಕಾಣೆಯಾಗಿದ್ದು ಇಂದು ಆತನ ಮೃತದೇಹ ಕೊಲೆಗೈಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣದ ಸಂಬಂಧ ಪೆÇಲೀಸರು ಈಗಾಗಲೇ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಆನ್‍ಲೈನ್ ಗೇಮ್ ವಿಚಾರವಾಗಿ ನಡೆದ ತರ್ಕ ಈ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಆದರೆ ರಾತ್ರಿ ಈ ಬಾಲಕನನ್ನು ಆರೋಪಿ ಕರೆ ಮಾಡಿ ನಿರ್ಜನವಾದ ಪೆÇದೆಯಿಂದ ಕೂಡಿದ ಪ್ರದೇಶಕ್ಕೆ ಕರೆಸಿಕೊಳ್ಳಲು ಕಾರಣವೇನು? ಬಾಲಕನನ್ನು ಕರೆಸಿ ಆತನಿಗೆ ಕಿರುಕುಳ ನೀಡಲಾಗಿದೆಯೇ? ಘಟನೆಯಲ್ಲಿ ಆರೋಪಿ ಜೊತೆ ಬೇರೆ ಯಾರಾದರೂ ಶಾಮಿಲಾಗಿದ್ದಾರೆಯೇ? ಎಂಬ ಗೊಂದಲ ಹಾಗೂ ಸಂಶಯ ಸಾರ್ವಜನಿಕರಲ್ಲಿ ಹುಟ್ಟು ಹಾಕಿದೆ. ಹೀಗಿರುವಾಗ ಪೆÇಲೀಸ್ ಇಲಾಖೆ ಈ ಪ್ರಕರಣದ ಬಗ್ಗೆ ವಿವಿಧ ಆಯಮಗಳಿಂದ ತನಿಖೆ ನಡೆಸಿ ಸಾರ್ವಜನಿಕರ ಸಂಶಯಗಳಿಗೆ ತೆರೆ ಎಳೆದು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಮುಂದಾಗಬೇಕೆಂದು ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆ.ಸಿ.ರೋಡ್ ಹಾಗೂ ಕಾರ್ಯದರ್ಶಿ ಸುನಿಲ್ ತೇವುಲ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
0 comments:
Post a Comment